HEALTH TIPS

ಎಚ್ಚರ ತಪ್ಪಿದರೆ ಪರಿಣಾಮ ನಿಶ್ಚಿತ: ರಾಜ್ಯದಲ್ಲಿ ಆರೋಗ್ಯ ಕಾರ್ಡ್ ಕಡ್ಡಾಯ: ಸ್ಲಿಪ್ ಅಥವಾ ಸ್ಟಿಕ್ಕರ್ ಗಳನ್ನು ಪಾರ್ಸೆಲ್‍ಗಳಿಗೆ ಅಂಟಿಸುವುದು ಕಡ್ಡಾಯ


                ತಿರುವನಂತಪುರಂ: ರಾಜ್ಯದಲ್ಲಿ ಆರೋಗ್ಯ ಕಾರ್ಡ್‍ಗಳನ್ನು ಕಡ್ಡಾಯಗೊಳಿಸಲಾಗಿದೆ. ಆಹಾರ ವಸ್ತುಗಳ ತಯಾರಿ ಮತ್ತು ವಿತರಿಸುವ ಎಲ್ಲಾ ಸಂಸ್ಥೆಗಳು (ಹೋಟೆಲ್/ಕ್ಯಾಂಟೀನ್) ಮತ್ತು ಉದ್ಯೋಗಿಗಳು ಆರೋಗ್ಯ ಕಾರ್ಡ್ ಅನ್ನು ಹೊಂದಿರಬೇಕು.
            ಆಹಾರ ಸುರಕ್ಷತಾ ಅಧಿಕಾರಿಗಳ ಜೊತೆಗೆ ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕರು ಕೂಡ ಆರೋಗ್ಯ ಕಾರ್ಡ್ ತಪಾಸಣೆ ನಡೆಸಬಹುದು. ಹೆಲ್ತ್ ಕಾರ್ಡ್ ನಲ್ಲಿ ಲೋಪ ಕಂಡು ಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಇಲಾಖೆ ಸೂಚನೆ. ಫೆಬ್ರವರಿ 1 ರಿಂದ ಆರೋಗ್ಯ ಕಾರ್ಡ್ ಕಡ್ಡಾಯಗೊಳಿಸಲಾಗುತ್ತಿದೆ.
      ಪಾರ್ಸೆಲ್‍ಗಳ ಮೇಲೆ ಆಹಾರ ಸುರಕ್ಷತೆಯ ಎಚ್ಚರಿಕೆಯೊಂದಿಗೆ ಸ್ಲಿಪ್ ಅಥವಾ ಸ್ಟಿಕ್ಕರ್ ಕಡ್ಡಾಯವಾಗಿದೆ. ಆಹಾರ ಪ್ಯಾಕ್ ಮಾಡಿದ ದಿನಾಂಕ, ಮುಕ್ತಾಯಗೊಳ್ಳುವ ದಿನಾಂಕದ ನಮೂದಾಗದ ಆಹಾರ ಪೆÇಟ್ಟಣ ನೀಡುವ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಪ್ರಸ್ತುತ ಮುಚ್ಚಿದ ಹೋಟೆಲ್ ಗಳನ್ನು ಪುನರಾರಂಭಿಸಿದ ಎರಡು ವಾರಗಳಲ್ಲಿ ಎಲ್ಲಾ ಉದ್ಯೋಗಿಗಳು ಆಹಾರ ಸುರಕ್ಷತೆ ತರಬೇತಿಗೆ ಒಳಗಾಗಬೇಕು.
         ರಾಜ್ಯದಲ್ಲಿ ಫುಡ್ ಪಾಯ್ಸನಿಂಗ್ ಅನಾಹುತಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಡ್ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ನಕಲಿ ಪ್ರಮಾಣಪತ್ರಗಳನ್ನು ತಯಾರಿಸಿ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಆಹಾರ ಸುರಕ್ಷತಾ ಇಲಾಖೆ ನಡೆಸುತ್ತಿರುವ ಎಲ್ಲ ತಪಾಸಣೆಗಳು ನಿಧಾನಗತಿಯಲ್ಲಿ ಸಾಗಿವೆ. ತಪಾಸಣೆಗಳ ಸಂಖ್ಯೆ ಕಡಿಮೆಯಾಗಿದೆ ಮತ್ತು ಆಹಾರ ಸುರಕ್ಷತಾ ಸಿಬ್ಬಂದಿಯ ಕೊರತೆಯನ್ನು ಪರಿಹರಿಸಲಾಗಿಲ್ಲ.
         ಆಹಾರ ಸುರಕ್ಷತಾ ಇಲಾಖೆಯು ಎಲ್ಲಾ ಹೋಟೆಲ್/ ಮಳಿಗೆಗಳ ಎಲ್ಲಾ ಉದ್ಯೋಗಿಗಳಿಗೆ ಆರೋಗ್ಯ ಕಾರ್ಡ್‍ಗಳನ್ನು ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಫೆ.1ರೊಳಗೆ ರಾಜ್ಯದಲ್ಲಿ ಆರೋಗ್ಯ ಕಾರ್ಡ್ ಕಡ್ಡಾಯಗೊಳಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries