ಕಾಸರಗೋಡು/ಪಯ್ಯನ್ನೂರು: ಪಯ್ಯನ್ನೂರಿನ ಹೋಟೆಲ್‍ವೊಂದರಲ್ಲಿ ಬೆಕ್ಕೊಂದು ಷವರ್ಮಾ ತಿನ್ನುತ್ತಿರುವ ವಿಡಿಯೋ ಹೊರಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪೆರುಂಬ ಬಳಿ ಇರುವ ಮಜ್ಲಿಸ್ ಹೋಟೆಲ್ ನಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಬೆಕ್ಕುಗಳು ಷವರ್ಮಾ ತಿನ್ನುತ್ತಿರುವ ದೃಶ್ಯವನ್ನು ದಾರಿಹೋಕರೊಬ್ಬರು ಸೆರೆ ಹಿಡಿದಿದ್ದಾರೆ. ಅಡುಗೆಯವರು ತೆರಳಿದ ಬಳಿಕ ಬೆಕ್ಕುಗಳು ಬೇಕಾಬಿಟ್ಟಿಯಾಗಿ ನುಗ್ಗಿದವು. ಯಾವುದೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸದೆ ಷವರ್ಮಾ ತಯಾರಿಸಿರುವುದು ವಿಡಿಯೋದಿಂದ ಸ್ಪಷ್ಟವಾಗಿದೆ.
ದೊಡ್ಡ ಮತ್ತು ಚಿಕ್ಕ ಎರಡು ಬೆಕ್ಕುಗಳು ಬೇಕಾಬಿಟ್ಟಿಯಾಗಿ ಪ್ರವೇಶಿಸಿ ಷವರ್ಮಾವನ್ನು ತಿನ್ನುತ್ತಿದ್ದವು. ಬಹಳ ಸಮಯದ ನಂತರ ಅಡುಗೆಯವರು ಬಂದು ಬೆಕ್ಕುಗಳನ್ನು ಓಡಿಸುತ್ತಾರೆ. ರಸ್ತೆ ಬದಿಯ ಹೊಗೆ ಮತ್ತು ಧೂಳು ಷವರ್ಮಾಕ್ಕೆ ಅಂಟಿಕೊಂಡಿರುವುದು ಕಂಡುಬಂದಿದ್ದು, ಅವುಗಳನ್ನು ಗಾಜಿನ ಕವಾಟಿಗೆ ಬಳಿಕ ಸ್ಥಳಾಂತರಿಸಲಾಯಿತು. ಬಯಲಿನಲ್ಲಿ ಷವರ್ಮಾ ತಯಾರಿಸಲು ನಿಷೇಧವಿದ್ದು ಇಲ್ಲಿ ಕಾನೂನು ಮರೆಯಲಾಗಿದೆ.
ಇದರ ಜತೆಗೆ ಹಲವು ದಿನಗಳಿಂದ ಬಳಸುತ್ತಿದ್ದ ಹಳೆಯ ಕೋಳಿ ಮತ್ತು ಎಣ್ಣೆ ಬಳಸಿ ಷವರ್ಮಾ ತಯಾರಿಸಿರುವುದು ಪತ್ತೆಯಾಗಿದೆ. ಷವರ್ಮಾ ಸೇವಿಸಿದ ಹಲವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಇದಾದ ಬಳಿಕ ಮತ್ತೆ ಬೆಕ್ಕುಗಳು ತಿನ್ನುತ್ತಿರುವ ದೃಶ್ಯಗಳು ಹೊರಬಿದ್ದಿವೆ. ಬೆಕ್ಕುಗಳು ಬಾಯಿಹಾಕಿದ್ದರಿಂದ ಷವರ್ಮಾಗಳನ್ನು ನಾಶಪಡಿಸಲಾಯಿತು ಎಂದು ಹೋಟೆಲ್ ಮಾಲೀಕರು ಸಮಜಾಯಿಷಿ ನೀಡಿದಾರೆ.
ಪಯ್ಯನ್ನೂರಿನಲ್ಲಿ ಷವರ್ಮಾ ಮಳಿಗೆಗೆ ಬೆಕ್ಕುಗಳ ದಾಳಿ: ಜಾಲತಾಣದಲ್ಲಿ ಸದ್ದುಮಾಡಿದ ದೃಶ್ಯ
0
ಜನವರಿ 13, 2023





