ಕಾಸರಗೋಡು:ರಾಜ್ಯ ಶಾಲಾ ಕಲೋತ್ಸವದ ಸಂದರ್ಭ ಯಕ್ಷಗಾನ ಸ್ಪರ್ಧೆಗೂ ಮುನ್ನ ನಡೆದ ಚೌಕಿ ಪೂಜೆ ವೇಳೆ ಕೆಲವರ ಗುಂಪು ಅಡ್ಡಿಪಡಿಸಿದ್ದನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಖಂಡಿಸಿದ್ದಾರೆ.
ಸ್ವಾಗತ ಗೀತೆಗೆ ಆಕ್ಷೇಪ ವ್ಯಕ್ತಪಡಿಸುವವರು ಯಕ್ಷಗಾನ ಸ್ಪರ್ಧೆಗೆ ಮೊದಲು ನಡೆಯುವ ಚೌಕಿ ಪೂಜೆಗೆ ಅವಮಾನ ಮಾಡುವ ಮಾಡಿದ್ದು ಕೇವಲ ಸ್ವಾಗತ ಗೀತೆ ವಿವಾದ ಮಾತ್ರವಲ್ಲದೆ ಯಕ್ಷಗಾನಕ್ಕೆ ಮಾಡಿರುವ ಅವಮಾನವನ್ನೂ ಸರಕಾರ ತನಿಖೆ ನಡೆಸಬೇಕು. ಶಾಲಾ ಕಲಾ ಉತ್ಸವದ ವಿಚಾರದಲ್ಲಿ ಸರಕಾರ ಹಾಗೂ ಲೋಕೋಪಯೋಗಿ ಸಚಿವರು ಕೋಮು ದಳ್ಳುರಿ ಸೃಷ್ಟಿಸಲು ಯತ್ನಿಸಿದರು. ಶಾಲಾ ಕಲೋತ್ಸವದಲ್ಲಿ ಮುಂದಿನ ವರ್ಷ ಗೋಮಾಂಸ ಬಡಿಸಿದರೆ ಹಂದಿ ಮಾಂಸವೂ ಇರಬೇಕು ಎಂದು ಸುರೇಂದ್ರನ್ ಕಟು ಶಬ್ದಗಳಿಂದ ಟೀಕಿಸಿದರು.
ಮಂಜೇಶ್ವರ ಚುನಾವಣಾ ಭ್ರμÁ್ಟಚಾರ ಪ್ರಕರಣ ಸುಳ್ಳು ಪ್ರಕರಣ. ಜಾತಿಯ ಆಧಾರದ ಮೇಲೆ ತನಗೆ ಹಿಂಸೆ ನೀಡಲಾಗಿದೆ ಎಂದು ಸುಂದರ ಇನ್ನೂ ಹೇಳಿಲ್ಲ. ರಾಜಕೀಯವಾಗಿ ತನಗೆ ಚ್ಯುತಿ ತರಲು ಈ ಪ್ರಕರಣವನ್ನು ಹೆಣೆಯಲಾಗಿದೆ. ಕೆ ಸುಂದರ ಅವರು ತಮ್ಮ ಉಮೇದುವಾರಿಕೆಯನ್ನು ಸ್ವಯಂಪ್ರೇರಿತವಾಗಿ ಹಿಂಪಡೆದಿದ್ದಾರೆ. ಪ್ರಕರಣದ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈವಾಡವಿದೆ ಎಂದು ಕೆ. ಸುರೇಂದ್ರನ್ ಹೇಳಿದರು.
ಕೋಝಿಕ್ಕೋಡ್, ವಯನಾಡು ಮತ್ತು ಕಾಸರಕೋಡು ಜಿಲ್ಲೆಗಳ ಯಕ್ಷಗಾನ ಸಂಘಗಳ ಚೌಕಿ ಪೂಜೆ ನಡೆಯುತ್ತಿದ್ದಾಗ ಸಂಘಟನಾ ಸಮಿತಿಯ ಪದಾಧಿಕಾರಿಗಳು ಬಂದು ಬಲವಂತವಾಗಿ ದೀಪವನ್ನು ಕಾಲಿಂದ ಒದೆದಿದ್ದರು. ಸಂಗೀತ ವಾದ್ಯಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪದ ಮೇಲೆ ಸಂಘಟನಾ ಸಮಿತಿಯ ಜನರು ದೀಪ ನಂದಿಸಿದ್ದರು.
ರಾಜ್ಯ ಶಾಲಾ ಕಲೋತ್ಸವದ ವೇಳೆ ಯಕ್ಷಗಾನಕ್ಕೆ ಅವಮಾನಮಾಡಿರುವವರ ಬಗ್ಗೆ ತನಿಖೆಯಾಗಬೇಕು: ಕೋಮು ಸಂಘರ್ಷ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ: ಕೆ. ಸುರೇಂದ್ರನ್
0
ಜನವರಿ 13, 2023





