ಕಣ್ಣೂರು: 20 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಿಕ್ಷಕನನ್ನು ಬಂಧಿಸಲಾಗಿದೆ. ತಳಿಪರಂಬ ಶಾಲೆಯ ಶಿಕ್ಷಕ ಕೊಂಡೋಟಿ ಮೂಲದ ಫೈಸಲ್ ಮೇಚೇರಿ ಬಂಧಿತ ಆರೋಪಿ.
ಐವರು ವಿದ್ಯಾರ್ಥಿನಿಯರು ದೂರು ನೀಡಿದ ನಂತರ ನಡೆಸಿದ ತನಿಖೆಯಲ್ಲಿ ಕಿರುಕುಳದ ಹೆಚ್ಚಿನ ವಿವರಗಳು ಹೊರಬಂದಿವೆ.
ಶಿಕ್ಷಕಿ ನಡೆಸಿದ ಕೌನ್ಸೆಲಿಂಗ್ ವೇಳೆ ಈ ಕಿರುಕುಳ ನಡೆದಿದೆ ಎಂದು ವಿದ್ಯಾರ್ಥಿನಿಯರು ಬಹಿರಂಗಪಡಿಸಿದ್ದಾರೆ. ನಂತರ ಚೈಲ್ಡ್ ಲೈನ್ ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೆÇಲೀಸರು ಪ್ರಕರಣವನ್ನು ಕೈಗೆತ್ತಿಕೊಂಡರು. ನಾಲ್ಕು ವರ್ಷಗಳಿಂದ ಈ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಕೆಲಸ ಮಾಡುತ್ತಿದ್ದ ಶಾಲೆಯಲ್ಲೂ ಆತನ ವಿರುದ್ಧ ಇದೇ ರೀತಿಯ ದೂರು ದಾಖಲಾಗಿತ್ತು ಎಂದು ವರದಿಯಾಗಿದೆ.
ಸದ್ಯ ಪೆÇಲೀಸರು ಐದು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇಪ್ಪತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ: ಶಿಕ್ಷಕ ಬಂಧನ
0
ಜನವರಿ 13, 2023





