HEALTH TIPS

ಬಹುಭಾಷಾ ಸಮ್ಮೇಳನ ಸಮಕಾಲೀನ ರಾಜಕೀಯಕ್ಕೆ ಕಾವ್ಯಾತ್ಮಕ ಪ್ರತಿಕ್ರಿಯೆ: ಕೆ.ಪಿ.ರಾಮನುಣ್ಣಿ: ಗಿಳಿವಿಂಡು ಬಹುಭಾಷಾ ಸಮ್ಮೇಳನ ಮುಕ್ತಾಯ


         ಮಂಜೇಶ್ವರ: ಗಿಳಿವಿಂಡು ಬಹುಭಾಷಾ ಸಮ್ಮೇಳನವು ಸಮಕಾಲೀನ ರಾಜಕೀಯ ಪರಿಸ್ಥಿತಿಗೆ ಅತ್ಯಂತ ಕಾವ್ಯಮಯ ಹಾಗೂ ಅರ್ಥಪೂರ್ಣ ಪ್ರತಿಕ್ರಿಯೆಯಾಗಿದೆ ಎಂದು ಸಾಹಿತಿ ಕೆ.ಪಿ. ರಾಮನುಣ್ಣಿ ಹೇಳಿದರು.
         ಮಂಜೇಶ್ವರ ಗೋವಿಂದ ಸ್ಮಾರಕದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ಎರಡು ದಿನಗಳ ‘ಗಿಳಿವಿಂಡು’ ಬಹುಭಾಷಾ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
       ಬಹುಭಾಷೆ ಎಂದರೆ ಬಹುಸಂಸ್ಕøತಿ. ಭಾμÉ ಸಂಸ್ಕೃತಿಯ ಸಂವಹನದ ಪ್ರಮುಖ ಸಾಧನವಾಗಿದೆ. ಕಾಸರಗೋಡಿನಲ್ಲಿ ಇμÉ್ಟೂಂದು ಭಾμÉಗಳು ಸಹಬಾಳ್ವೆಯಿಂದ ಅಸ್ತಿತ್ವದಲ್ಲಿವೆ ಎಂದರೆ ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಂಡು ಪರಸ್ಪರ ಗೌರವಿಸುವ ಬಹುಸಂಸ್ಕೃತಿಯ ಸಹಬಾಳ್ವೆಯ ನಾಡು ಎಂದರ್ಥ. ಇತರ ಭಾಷೆಗಳನ್ನು ಶತ್ರು ಸ್ಥಾನದಲ್ಲಿ ನಿಲ್ಲಿಸಿ ಅವೆಲ್ಲವೂ ಕೆಟ್ಟದ್ದು ಎಂಬಂತೆ ಬಿಂಬಿಸುವುದು ಸಾಮ್ರಾಜ್ಯಶಾಹಿಯ ಸೃಷ್ಟಿ. ಸಾಮ್ರಾಜ್ಯಶಾಹಿ ಮೇಲುಗೈ ಸಾಧಿಸಿದಾಗ ಭಾಷೆಗಳು ಪರಸ್ಪರ ಶತ್ರುಗಳಾಗುತ್ತವೆ. ಒಂದೇ ಭಾಷೆ ಮತ್ತು ಏಕ ಸಂಸ್ಕೃತಿಯತ್ತ ಸಾಗುವುದು ಭಾರತೀಯ ಬಹುತ್ವದ ಕಗ್ಗೊಲೆಗೆ ಕಾರಣವಾಗುತ್ತದೆ ಎಂದರು.
            ಶ್ರೀಕೃಷ್ಣನ ಜೀವನ, ಬುದ್ಧನ ಕೊನೆಯ ದಿನಗಳು ಮತ್ತು ಕ್ರಿಸ್ತನ ಕೊನೆಯ ದಿನಗಳನ್ನು ಬರೆದ ರಾಷ್ಟ್ರಕವಿ ಗೋವಿಂದ ಪೈ ಅವರು ಕಾಸರಗೋಡಿನ ಸಮಸ್ತ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಅಮರ ಕವಿ ಎಂದರು.
       ಪಿ.ವಿನಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರವೀಂದ್ರನ್ ಸ್ವಾಗತಿಸಿ, ವಿಜಯಕುಮಾರ್ ವಂದಿಸಿದರು.
     ಚಂದೇರ ಚೆಂಪಿಲೋಟ್ ಭಗವತಿ ದೇವಸ್ಥಾನದ ಪೂರಕ್ಕÀಳಿ ಸಂಘದವರಿಂದ ಪೂರಕ್ಕಳಿ ಮತ್ತು ಕೋಝಿಕ್ಕೋಡ್ ಸಂಕೀರ್ತನದ ನಾಟಕ ‘ವೆಟ್ಟ’ ಪ್ರದರ್ಶನ ನಡೆಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries