ಬದಿಯಡ್ಕ: ಗೋಳಿಯಡ್ಕ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಆಶ್ರಯದಲ್ಲಿ ವಿಷ್ಣುಮೂರ್ತಿ, ಬ್ರಹ್ಮಶ್ರೀ ಮೊಗೇರ ದೈವಗಳ ಮತ್ತು ಕೋಮರಾಯ ಚಾಮುಂಡಿ ದೈವದ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಲಾಯಿತು. ಧರ್ಮಾಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿ ಆಶೀರ್ವದಿಸಿದರು.
ಸೇವಾಸಮಿತಿಯ ಅಧ್ಯಕ್ಷ ಸತ್ಯನಾರಾಯಣ ಜಿ., ಪ್ರತಿಷ್ಠಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಉಮೇಶ ಜಿ., ಅಧ್ಯಕ್ಷ ಗಂಗಾಧರ ಗೋಳಿಯಡ್ಕ, ಕಾರ್ಯದರ್ಶಿ ಸೋಮನಾಥ, ಗೌರವ ಸಲಹೆಗಾರರಾದ ತಿರುಪತಿಕುಮಾರ ಭಟ್, ಜಗನ್ನಾಥ ರೈ ಪೆರಡಾಲಗುತ್ತು, ಡಿ. ಶಂಕರ, ಪುರುಷೋತ್ತಮ ಆಚಾರ್ಯ, ಚಂದ್ರ ಗೋಳಿಯಡ್ಕ, ಪ್ರಶಾಂತ್, ಪ್ರಮೋದ್, ಕೃಷ್ಣಪ್ರಸಾದ್ ಮುನಿಯೂರು ಪಾಲ್ಗೊಂಡಿದ್ದರು. ಮಾರ್ಚ್ 21ರಿಂದ 25ರ ತನಕ ಪ್ರತಿಷ್ಠಾ ಕಾರ್ಯಕ್ರಮವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಮಾರ್ಚ್ 23ರಂದು ಪ್ರತಿಷ್ಠೆ ನಡೆಯುವುದು.
ಗೋಳಿಯಡ್ಕ ದೈವಗಳ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆ ಧರ್ಮಸ್ಥಳದಲ್ಲಿ ಬಿಡುಗಡೆ
0
ಜನವರಿ 12, 2023
Tags




.jpg)
