ಮಂಜೇಶ್ವರ: ಬಹುಭಾಷಾ ಸಂಗಮಭೂಮಿಯೆನಿಸಿರುವ ಕಾಸರಗೋಡಿನ ಮಂಜೇಶ್ವರ ಗೋವಿಮಡ ಪೈ ಸ್ಮಾರಕದಲ್ಲಿ ಇತ್ತೀಚೆಗೆ ನಡೆದ ‘ಗಿಳಿವಿಂಡು’ ಬಹುಭಾಷಾ ಸಮ್ಮೇಳನ ವೇದಿಕೆಯಲ್ಲಿ ಸಪ್ತಭಾಷೆಗಳ ಕವಿ ಸಮ್ಮೇಳನ ಗಮನ ಸೆಳೆಯಿತು.
ಕವಿ ಪಿ.ಎನ್.ಗೋಪಿಕೃಷ್ಣನ್ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಭಾμÉಗಳು ಯಾವಾಗಲೂ ಇತರ ಭಾμÉಗಳೊಂದಿಗೆ ಸಂವಹನ ನಡೆಸಬೇಕು ಮತ್ತು ಕಾಸರಗೋಡಿನ ನೆಲದಲ್ಲಿ ಈ ಭಾಷಾ ಸಂವಾದಕ್ಕೆ ಸಾಕಷ್ಟು ಸಾಮಥ್ರ್ಯವಿದೆ ಎಂದು ಅವರು ಹೇಳಿದರು.
ತುಳು, ಕನ್ನಡ, ಮಲಯಾಳಂ, ಕೊಂಕಣಿ, ಬ್ಯಾರಿ, ಉರ್ದು ಮತ್ತು ಮರಾಠಿ ಭಾμÉಗಳಲ್ಲಿ ಕವನ ವಾಚನ ನಡೆಯಿತು. ತುಳುವಿನಲ್ಲಿ ಮನೋಜ್ ವಾಮಂಜೂರು, ಕನ್ನಡದಲ್ಲಿ ಮೀನಾಕ್ಷಿ ರಾಮಚಂದ್ರ, ಮಲಯಾಳಂನಲ್ಲಿ ದಿವಾಕರನ್ ವಿಷ್ಣುಮಂಗಲಂ, ಕೊಂಕಣಿಯಲ್ಲಿ ಗಣೇಶ್ ಪ್ರಸಾದ್, ಬ್ಯಾರಿಯಲ್ಲಿ ರಿಯಾಜ್ ಅಶ್ರಫ್, ಉರ್ದುವಲ್ಲಿ ಅಝೀಮ್ ಮಣಿಮುಂಡ, ಮರಾಠಿಯಲ್ಲಿ ಶ್ರೀನಿವಾಸ ನಾಯಕ್ ಕವನಗಳನ್ನು ಪ್ರಸ್ತುತಪಡಿಸಿದರು. ಬಾಲಕೃಷ್ಣ ಚೆರ್ಕಳ ಸ್ವಾಗತಿಸಿ, ಮಹಾಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್‍ನ ಕಾರ್ಯದರ್ಶಿ ಉಮೇಶ್ ಎಂ ಸಾಲಿಯಾನ್ ವಂದಿಸಿದರು.
ಏಳು ಭಾಷೆಗಳ ಕವಿಗಳಿಂದ ಗಿಳಿವಿಂಡು ವೇದಿಕೆಯಲ್ಲಿ ಕವಿತೆಗಳ ಮಹಾಮಜ್ಜನ
0
ಜನವರಿ 09, 2023

.jpeg)
