HEALTH TIPS

ಮಧ್ಯಪ್ರದೇಶ: ಐದು ಮರಿಗಳಿಗೆ ಜನ್ಮ ನೀಡಿದ ಹುಲಿ

 

                  ಮಂಡಲಾ : ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್‌) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

                   'ಸಂರಕ್ಷಿತ ಪ್ರದೇಶದ ಮುಕ್ಕಿ ವಲಯದಲ್ಲಿ, ಟಿ-27 ಎಂಬ ಹೆಸರಿನ ಹುಲಿಯು ಮೊದಲ ಬಾರಿಗೆ ತನ್ನ ಮರಿಗಳೊಂದಿಗೆ ಶನಿವಾರ ಕಾಣಿಸಿಕೊಂಡಿದೆ' ಎಂದು ಕ್ಷೇತ್ರ ನಿರ್ದೇಶಕ ಎಸ್‌.ಕೆ.

ಸಿಂಗ್‌ ಅವರು ಹೇಳಿದ್ದಾರೆ.

              'ತಾಯಿ ಹುಲಿಯ ವಯಸ್ಸು 9 ವರ್ಷವಾಗಿದ್ದು, ಬಹುಶಃ ಕಳೆದ ವರ್ಷದ ನವೆಂಬರ್‌ನಲ್ಲಿ ಈ ಮರಿಗಳಿಗೆ ಜನ್ಮ ನೀಡಿರಬಹುದು. ಹುಲಿಮರಿಗಳಿಗೆ ಈಗ ಸುಮಾರು ಮೂರು ತಿಂಗಳು ವಯಸ್ಸು' ಎಂದು ಕೆಟಿಆರ್‌ನ ಹಿರಿಯ ವನ್ಯಜೀವಿ ಪಶುವೈದ್ಯ ಸಂದೀಪ್‌ ಅಗರ್ವಾಲ್‌ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries