ಹೆಚ್ಚುವರಿ ಅಧ್ಯಾಪಕರಿಗೆ ಅರ್ಜಿ ಆಹ್ವಾನಿಸಲಾಗಿದೆ
ಕಾಸರಗೋಡು::ಜಿಲ್ಲೆಯ ಬ್ಲಾಕ್ ಪಂಚಾಯತ್‌ಗಳಲ್ಲಿ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯ
2022-23 ರ ಆರ್ಥಿಕ ವರ್ಷದ ವಾರ್ಷಿಕ ಯೋಜನೆಯಲ್ಲಿ ಸ್ಥಾಪಿಸಲಾಗುವ ಬ್ಲಾಕ್ ಪಂಚಾಯತ್
ಸಂಪನ್ಮೂಲ ಕೇಂದ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಅಧ್ಯಾಪಕರ ಆಯ್ಕೆಗಾಗಿ ನೆರೆಕರೆ
ಗುಂಪಿನ ಸದಸ್ಯರು / ಸಹಾಯಕ ಗುಂಪಿನ ಸದಸ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಖಾಲಿ ಹುದ್ದೆಗಳ ಸಂಖ್ಯೆ 6. (ಕಾಸರಗೋಡು, ಕಾರಡ್ಕ, ಮಂಜೇಶ್ವರ, ಕಾಞಂಗಾಡ್, ನೀಲೇಶ್ವರ,
ಪರಪ್ಪ). ಎಂ ಎಸ್ ಡಬ್ಲ್ಯು/ ಎಂ ಬಿ ಎ (ಎಚ್ ಆರ್) / ಎಂ ಎ ಸಮಾಜಶಾಸ್ತ್ರ /
ಅಭಿವೃದ್ಧಿ ಅಧ್ಯಯನದ ಅರ್ಹತೆ ಹೊಂದಿರಬೇಕು. 3 ವರ್ಷಗಳ ಕೆಲಸದ ಅನುಭವ. ವಯೋಮಿತಿ
2023 ಜನವರಿ 10ಕ್ಕೆ 40 ವರ್ಷ ಮೀರಿರಬಾರದು. ಸಂದರ್ಶನದ ಆಧಾರದಲ್ಲಿ ಆಯ್ಕೆ
ಮಾಡಲಾಗುತ್ತದೆ. ಅರ್ಜಿಯನ್ನು ನೇರವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಕಛೇರಿ ಅಥವಾ www.kudumbashree.org
ವೆಬ್‌ಸೈಟ್‌ನಿಂದ ಪಡೆಯಬಹುದು. ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕ ಜನವರಿ
21 ಸಂಜೆ 5 ಗಂಟೆಯ ವರೆಗೆ. ಜನವರಿ 27 ರಂದು ಸಂದರ್ಶನ ನಡೆಯಲಿದೆ. ಅರ್ಜಿ
ಸಲ್ಲಿಸಬೇಕಾದ ವಿಳಾಸ :
ಜಿಲ್ಲಾ ಮಿಷನ್ ಸಂಯೋಜಕರು
ಸಿವಿಲ್ ಸ್ಟೇಷನ್
ವಿದ್ಯಾನಗರ ಪಿ. ಓ,
ಕಾಸರಗೋಡು ಜಿಲ್ಲೆ,
ಪಿನ್-671 123.
ದೂರವಾಣಿ 04994 256111.




