ಕುಂಬಳೆ: ಸಯ್ಯದ್ ತ್ವಾಹಿರುಲ್ ಅಹ್ದಲ್ ಉರೂಸ್ ಅಂಗವಾಗಿ ಮಾಜಿ ಅನಿವಾಸಿ ಕುಟುಂಬ ಸಮ್ಮಿಲನವನ್ನು ಪುತ್ತಿಗೆ ಮುಹಿಮ್ಮತ್ ನಲ್ಲಿ ಆಯೋಜಿಸಲಾಗಿತ್ತು. ಅನಿವಾಸಿ ಬದುಕಿನ ವಿಧ ಹಂತಗಳ ಬಗ್ಗೆ ಕಾರ್ಯಕರ್ತರು ಹಾಗೂ ನಾಜಿ ಅನಿವಾಸಿ ಸದಸ್ಯರಿಗೆ ಹೊಸ ಅನುಭವ ನೀಡಿತು.
ಅನಿವಾಸಿ ಶ್ರೇಯೋಭಿವೃದ್ಧಿಗೆ ಸರ್ಕಾರ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸಭೆ ಆಗ್ರಹಿಸಿತು.
ಉದ್ಯೋಗ ಕಳೆದುಕೊಂಡು ಹಿಂದಿರುಗಿದವರಿಗೆ ಸರ್ಕಾರ ಜೀವನೋಪಾಯವನ್ನು ಖಾತರಿಪಡಿಸಬೇಕು. ಕೋವಿಡ್ ಅವಧಿಯಲ್ಲಿ ಹಿಂದಿರುಗಿದ ಅನೇಕರು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗೆ ಕೂಡಲೇ ಮಧ್ಯಪ್ರವೇಶಿಸಿ ಎಲ್ಲ ಅನಿವಾಸಿಗಳ ಪುನರ್ವಸತಿಗೆ ಸರ್ಕಾರ ಮುಂದಾಗಬೇಕು ಎಂದು ಸಭೆ ಒತ್ತಾಯಿಸಿತು.
ವೈ.ಎಂ.ಅಬ್ದುಲ್ ರಹ್ಮಾನ್ ಅಹ್ಸನಿ ಅಹ್ದಲ್ ಮಕಾಮ್ ಝಿಯಾರತ್ ನೇತೃತ್ವ ವಹಿಸಿದ್ದರು. ಮುಹಿಮ್ಮತ್ ಹಣಕಾಸು ಕಾರ್ಯದರ್ಶಿ ಹಾಜಿ ಅಮೀರಲಿ ಚೂರಿ ಅವರ ಅಧ್ಯಕ್ಷತೆಯಲಲಿ ನಡೆದ ಸಮಾವೇಶವನ್ನು ಮುಹಿಮ್ಮತ್ ಶೈಕ್ಷಣಿಕ ಕಾರ್ಯದರ್ಶಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲಾ ಕುಂಞÂ ಫೈಝಿ, ವಿದೇಶ ವ್ಯವಹಾರಗಳ ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್ ಮುಖ್ಯ ಭಾಷಣಗೈದರು. ಅಬ್ಬಾಸ್ ಮುಸ್ಲಿಯಾರ್ ಚೇರೂರು, ಸಿಎಂಎ ಚೇರೂರು ಸಿದ್ದೀಕ್ ಹಾಜಿ ಉಳುವಾರ್, ಕೆ.ಪಿ.ಮೊಯ್ತೀನ್ ಹಾಜಿ ಕೊಡ್ಯಮೆ, ಸುಲ್ತಾನ್ ಮಹ್ಮೂದ್ ಹಾಜಿ, ಕೆ.ಕೆ.ಅಬ್ಬಾಸ್ ಹಾಜಿ ಕೊಡ್ಯಮೆ, ಅಬ್ದುಲ್ಲ ಗುಣಾಜೆ ಮತ್ತಿತರರು ಉಪಸ್ಥಿತರಿದ್ದರು.
ಅನಿವಾಸಿಗಳ ಪುನರ್ವಸತಿ ಖಾತ್ರಿ ಪಡಿಸಬೇಕು: ಮುಹಿಮ್ಮತ್ ನಲ್ಲಿ ನಡೆದ ಅನಿವಾಸಿ ಕುಟುಂಬ ಸಂಗಮದಲ್ಲಿ ಆಗ್ರಹ
0
ಜನವರಿ 26, 2023
Tags




.jpg)
