ಬದಿಯಡ್ಕ: ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ(ಪಿಎಚ್‍ಸಿ) ಎಸ್‍ವೈಎಸ್ ಕುಂಬ್ಡಾಜೆ ವಲಯ ವತಿಯಿಂದ ಸಾಂತ್ವನ ಔಷಧ ಬಾಟಲಿ ವಿತರಣೆ ನಡೆಯಿತು. ಸಾಂತ್ವನದಿಂದ ಪಿಎಚ್‍ಸಿ ನೇತೃತ್ವದಲ್ಲಿ ಉಪಶಾಮಕ ರೋಗಿಗಳಿಗೆ ನೀಡುವ ಕಿಟ್‍ನಲ್ಲಿ ಧನಸಹಾಯ ನೀಡಲಾಯಿತು.
ಎಂಡೋಸಲ್ಫಾನ್ ಪೀಡಿತ ಪ್ರದೇಶವಾಗಿರುವ ಕುಂಬ್ಡಾಜೆ ಪಂಚಾಯಿತಿ ಹಾಗೂ ಸುತ್ತಮುತ್ತಲಿನ 100ಕ್ಕೂ ಹೆಚ್ಚು ರೋಗಿಗಳು ಪ್ರತಿನಿತ್ಯ ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಿದ್ದು, ಔಷಧ ಕೊಳ್ಳಲು ಬಾಟಲ್ ಇಲ್ಲದೇ ರೋಗಿಗಳು ಆಗಾಗ ಪರದಾಡುವ ಪರಿಸ್ಥಿತಿಯನ್ನು ಅರಿತು ಎಸ್ ವೈಎಸ್ ಕುಂಬ್ಡಾಜೆ ವಲಯ ಘಟಕ ಬಾಟಲ್ ಗಳನ್ನು ವಿತರಿಸಿತು.
ವೈದ್ಯಾಧಿಕಾರಿ ಡಾ.ಸೈಯದ್ ಶುಹೈಬ್ ತಂಙಳ್ ಮಾತನಾಡಿ, ಕೇರಳ ಮುಸ್ಲಿಂ ಜಮಾತ್ ಎಸ್ ವೈಎಸ್ ಎಸ್ ನ ಇಂತಹ ಅನುಕರಣೀಯ ಸೇವೆ ಶ್ಲಾಘನೀಯ ಎಂದರು.
ಎಸ್‍ವೈಎಸ್ ಮುಖಂಡರು ಪಿಎಚ್‍ಸಿ ವೈದ್ಯಾಧಿಕಾರಿ ಡಾ.ಸೈಯದ್ ಶುಹೈಬ್ ತಂಙಳ್ ಅವರಿಗೆ ಔಷಧ ಬಾಟಲಿ ಹಸ್ತಾಂತರಿಸಿದರು.
ಜಿಲ್ಲಾ ಕಾರ್ಯದರ್ಶಿ ಅಬೂಬಕರ್ ಕಾಮಿಲ್ ಸಖಾಫಿ, ವಲಯಾಧ್ಯಕ್ಷ ಅಬ್ದುಲ್ ಅಝೀಝ್ ಹಿಮಾಮಿ ಗೋಸಾಡ, ವಲಯ ಕಾರ್ಯದರ್ಶಿ ಹಾಫಿಳ್ ಎನ್.ಕೆ.ಎಂ.ಮಹ್ಳರಿ ಬೆಳಿಂಜ, ವಲಯ ಅಧ್ಯಕ್ಷ ಹುಸೈನ್ ಸಖಾಫಿ ತುಪ್ಪಕ್ಕಲ್, ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ತೊಟ್ಟಂ, ಅಬ್ದುಲ್ ಖಾದರ್ ಮೌಲವಿ ಮಾರ್ಪನಡ್ಕ, ಇಬ್ರಾಹಿಂ ಮುಸ್ಲಿಯಾರ್ ಪುತ್ರೋಡಿ, ಅಶ್ರಫ್ ಮುಸ್ಲಿಯಾರ್ ಪುತ್ರೋಡಿ, ಅಶ್ರಫ್ರ ಮುಕ್ಕಾ, ಆರೋಗ್ಯ ನಿರೀಕ್ಷಕ ಬೈಜು ಎಸ್ ರಾಮ್, ಸಾರ್ವಜನಿಕ ಆರೋಗ್ಯ ನರ್ಸ್ ಸುಧರ್ಮ ಮತ್ತು ಹಿರಿಯ ಗುಮಾಸ್ತ ರಾಜಶೇಖರ್ ಉಪಸ್ಥಿತರಿದ್ದರು.
ಕುಂಬ್ಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಸ್‍ವೈಎಸ್ ನಿಂದ ಔಷಧಿ ಬಾಟಲಿ ಸಾಂತ್ವನ ನೆರವು ಹಸ್ತಾಂತರ
0
ಜನವರಿ 26, 2023
Tags




.jpg)
