ಕಾಸರಗೋಡು: ಕಸ್ಟಂಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಸಆಗಿಸುತ್ತಿದ್ದ 1.300ಕಿ.ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು, ಚೆರ್ಕಳ ಸಿಟಿಸನ್ ನಗರ ನಿವಾಸಿ ಮಹಮ್ಮದ್ ಫಾಹಿಸ್ ಎಂಬಾತನನ್ನು ಬಂಧಿಸಿದ್ದಾರೆ. ಕಾಸರಗೋಡು ಕಸ್ಟಂಸ್ ಇಲಾಖೆ ಸೂಪರಿಂಟೆಂಡೆಂಟ್ ಪಿ.ಟಿ ರಾಜೀವ್ ಅವರಿಗೆ ಲಭಿಸಿದ ಮಾಹಿತಿಯನ್ವಯಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಚಿನ್ನ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಚಿನ್ನದ ಮೌಲ್ಯ 76ಲಕ್ಷ ರೂ. ಅಂದಾಜಿಸಲಾಗಿದೆ.
ಬ್ರೆಡ್ ರೋಸ್ಟ್ ತಯಾರಿ ಸಲಕರಣೆಯ ಮೋಟಾರ್ ಒಳಗಿನ ಕೆಲವೊಂದು ಬಿಡಿಭಾಗಗಳಿಗೆ ಚಿನ್ನದ ತುಣುಕುಗಳನ್ನು ಅಳವಡಿಸಿ ಸಾಗಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಲಾಗಿದೆ. ಕಣ್ಣೂರು ವಿಮಾಣ ನಿಲ್ದಾಣಕ್ಕೆ ವಿಮಾನದಲ್ಲಿ ಬಂದಿಳಿದು ಅಲ್ಲಿಂದ ರೈಲಿನಲ್ಲಿ ಏರನಾಡ್ ಎಕ್ಸ್‍ಪ್ರೆಸ್ ಮೂಲಕ ಕಾಸರಗೋಡಿಗೆ ಆಗಮಿಸಿ ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಈತನನ್ನು ವಶಕ್ಕೆ ತೆಗೆದು ಬ್ಯಾಗ್ ತಪಾಸಣೆ ನಡೆಸಲಾಗಿದೆ.
ಬ್ರೆಡ್‍ರೋಸ್ಟ್ ತಯಾರಿ ಸಲಕರಣೆಯೊಳಗಿರಿಸಿ 1.300ಕಿ.ಗ್ರಾಂ ಚಿನ್ನಸಾಗಿಸಲೆತ್ನಿಸದಾತನ ಬಂಧನ
0
ಫೆಬ್ರವರಿ 03, 2023




