ಕಾಸರಗೋಡು:ಪುರಾತನ ಕಾಲದಿಂದಲೇ ಆರಾಧಿಸುತ್ತಾ ಬಂದಿರುವ ಕೂಡ್ಲು ಗಂಗೆ ಹೊಸಮನೆ ಸ್ವಾಮಿ ಕೊರಗಜ್ಜ ಸನ್ನಿಧಿ ಪುನ: ಪ್ರತಿಷ್ಠಾ ಮಹೋತ್ಸವ ಫೆ. 4ಮತ್ತು 5ರಂದು ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಜರಗಲಿದೆ. 4ರಂದು ಸಂಜೆ 4ಕ್ಕೆ ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ನಂತರ ಧಾರ್ಮಿಕ ಸಭೆಯು ನಡೆಯಲಿದೆ. ತುಳು ಜಾನಪದ ವಿದ್ವಾಂಸ ಕೆ.ಕೆ ಪೇಜಾವರ ಹಾಗೂ ಶಿವದೂತ ಗುಳಿಗ ನಾಟಕದ ಗುಳಿಗ ಪಾತ್ರಧಾರಿ, ಪ್ರಸಿದ್ಧ ಚಲನಚಿತ್ರ ಕಾಂತಾರ ಸಿನಿಮಾದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮತ್ತು ಇನ್ನಿತರ ವಿಶಿಷ್ಟ ಅತಿಥಿಗಳು ಭಾಗವಹಿಸಲಿದ್ದಾರೆ. ರಾತ್ರಿ ಗುರು ಬಾಲಕೃಷ್ಣ ಮಂಜೇಶ್ವರ ಶಿಷ್ಯ ವೃಂದದವರಿಂದ ನೃತ್ಯಾಭಿಷೇಕ ವಿಷೇಶ ಕಾರ್ಯಕ್ರಮ ನಡೆಯಲಿದೆ.
5ರಂದು ಬೆಳಗ್ಗೆ ಗಣಹೋಮ ಬಳಿಕ ಗಣೇಶ ಉಳ್ಳೋಡಿ ಇವರ ಕಾರ್ಮಿಕತ್ವದಲ್ಲಿ ಶ್ರೀಕೊರಗಜ್ಜ ದೈವದ ಶಿಲಾ ಪ್ರತಿಷ್ಠೆಯು ನಡೆಯಲಿದೆ. ಬಳಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅನ್ನದಾನ ನಡೆಯಲಿದೆ. ಮಧ್ಯಾಹ್ನ ರಂಗ ಚಿನ್ನಾರಿ ಕಾಸರಗೋಡು ಏರ್ಪಡಿಸುವ ದ.ಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅಂತರಾಷ್ಟ್ರೀಯ ಖ್ಯಾತಿಯ ಗಾಯಕ ರವೀಂದ್ರ ಪ್ರಭು ನೇತೃತ್ವದಲ್ಲಿ ಭಕ್ತಿ ಗಾನ ಮೇಳ ಶಿಶಿರ ಗಾನ ನಡೆಯಲಿದೆ. ಬಳಿಕ ಚೌಕಾರು ಮಂತ್ರಮೂರ್ತಿ ಗುಳಿಗನ ಕೋಲ ನಡೆಯಲಿದೆ. ಸಂಜೆ 6ರಿಂದ ಸ್ಥಳೀಯ ಬಾಲ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮವು ಜರಗಲಿದೆ. ರಾತ್ರಿ ಶ್ರೀ ಕೊರಗಜ್ಜ ದೈವದ ಕೋಲ, ಅನ್ನದಾನ, ಪ್ರಸಾದ ವಿತರಣೆ ನಡೆಯಲಿದೆ.
ಕೂಡ್ಲು ಹೊಸಮನೆ ಸ್ವಾಮಿ ಕೊರಗಜ್ಜ ಸನ್ನಿದಿಯಲ್ಲಿ ಇಂದಿನಿಂದ ಪುನ: ಪ್ರತಿಷ್ಠಾ ಮಹೋತ್ಸವ
0
ಫೆಬ್ರವರಿ 03, 2023

