ಪೆರ್ಲ: ಎಣ್ಮಕಜೆ ಪಂಚಾಯಿತಿಯ ಬಣ್ಪುತ್ತಡ್ಕ ಸನಿಹದ ಶೇಣಿ ಮಙËರೆ ಎಂಬಲ್ಲಿ ಮನೆಯೊಳಗೆ ಮಹಿಳೆ ನಿಗೂಢವಾಗಿ ಸಾವನ್ನಪ್ಪಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತಿರುವನಂತಪುರದಿಂದ ಅಲ್ಲಿನ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ವಯನಾಡ್ ಜಿಲ್ಲೆಯ ಮೇಪ್ಪಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಆಂಟೋ ಸೆಬಾಸ್ಟಿಯನ್(32)ಪೊಲೀಸ್ ವಶದಲ್ಲಿರುವ ಆರೋಪಿ. ಏಳ್ಕಾನದಲ್ಲಿ ಶಾಜಿ ಎಂಬವರ ಮಾಲಿಕತ್ವದ ರಬ್ಬರ್ ತೋಟದ ಶೆಡ್ಡಿನೊಳಗೆ ಕೊಲ್ಲಂ ನಿವಾಸಿ ನೀತುಕೃಷ್ಣ(30)ಮೃತದೇಹ ಬುಧವಾರ ಪತ್ತೆಯಾಗಿತ್ತು.
ಕೆಲವು ತಿಂಗಳ ಹಿಂದೆ ತೋಟಕ್ಕೆ ಕೆಲಸಕ್ಕೆ ಆಗಮಿಸಿದ್ದ ಆಂಟೋ ಸೆಬಾಸ್ಟಿಯನ್, ಒಂದುವರೆ ತಿಂಗಳ ಹಿಂದೆ ನೀತುಕೃಷ್ಣಳನ್ನೂ ಕರೆಸಿಕೊಂಡಿದ್ದನು. ಈ ಮಧ್ಯೆ ಮಹಿಳೆಯ ಜೀರ್ಣಗೊಂಡ ಮೃತದೇಹ ಬುಧವಾರ ಶೆಡ್ಡಿನೊಳಗೆ ಪತ್ತೆಯಾಗಿದ್ದು, ಆಂಟೋ ಸೆಬಾಸ್ಟಿಯನ್ ತಲೆಮರೆಸಿಕೊಂಡಿದ್ದನು. ಕತ್ತು ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿರುವುದಾಗಿ ಶವಮಹಜರು ವರದಿಯಲ್ಲಿ ಮಾಹಿತಿ ಲಭಿಸಿದೆ. ಕೇರಳದ ಎಲ್ಲಾ ಪೊಲೀಸ್ ಠಾಣೆಗಳಿಗೂ ಆರೋಪಿ ಬಗ್ಗೆ ಮಾಹಿತಿ ರವಾನಿಸಲಾಗಿದ್ದು, ತಿರುವನಂತಪುರ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬದಿಯಡ್ಕ ಠಾಣೆ ಪೊಲೀಸರ ತಂಡ ಆರೋಪಿಯನ್ನು ಕರೆತರಲು ತಿರುವನಂತಪುರ ತೆರಳಿದ್ದಾರೆ.
ಮನೆಯೊಳಗೆ ಮಹಿಳೆಯ ಮೃತದೇಹ ಪತ್ತೆ-ಆರೋಪಿ ತಿರುವನಂತಪುರದಿಂದ ಪೊಲೀಸ್ ವಶಕ್ಕೆ
0
ಫೆಬ್ರವರಿ 03, 2023

