ಕಾಸರಗೋಡು: ಕೇಂದ್ರ ಸರ್ಕಾರದ ಸಲಹೆಯಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶಾಲಾ ಮಧ್ಯಾಹ್ನದ ಊಟದ ಯೋಜನೆ (ಪಿಎಂ ಪೆÇೀಷನ್) ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸುವ ಕ್ರಮಗಳನ್ನು 'ಕಿಲಾ' ದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಕಿಲಾದಿಂದ ನೇಮಕಗೊಂಡ ಸಾಮಾಜಿಕ ಲೆಕ್ಕಪರಿಶೋಧನಾ ಫೆಸಿಲಿಟೇಟರ್‍ಗಳು ನೂನ್‍ಮೀಲ್ ಅಧಿಕಾರಿಯ ಸಹಾಯದಿಂದ ಆಡಿಟ್ ನಡೆಸಲಿದ್ದಾರೆ. ಕಾಸರಗೋಡು ಉಪಜಿಲ್ಲೆಯ ಕ್ಲಸ್ಟರ್ 1 ರಲ್ಲಿ ಜಿ ಜೆ ಬಿ ಎಸ್ ಮಧೂರು, ಜಿ ಎಲ್ ಪಿ ಎಸ್ ಅದ್ರುಕುಯಿ, ಜಿ ಯು ಪಿ ಎಸ್ ಕೋಳಿಯಡ್ಕ, ಸಿ ಎಚ್ ಎಸ್ ಎಸ್ ಚಟ್ಟಂಚಾಲ್, ಎ ಯು ಪಿ ಎಸ್ ಮಡೋನಾ ಎಂಬೀ ಶಾಲೆಗಳ ಸಾರ್ವಜನಿಕ ಅಹವಾಲು ಫೆಬ್ರವರಿ 15ರಂದು ಬೆಳಗ್ಗೆ 10.30ಕ್ಕೆ ಎ ಯು ಪಿ ಎಸ್ ಮಡೋನದಲ್ಲಿ ಜರುಗಲಿದೆ. ಕಾಸರಗೋಡು ನಗರಸಭಾ ಅಧ್ಯಕ್ಷ ವಿ. ಎಂ. ಮುನೀರ್ ಅವರ ಅಧ್ಯಕ್ಷತೆಯಲ್ಲಿ ಆಡಿಟ್ ನಡೆಯಲಿದೆ.
ಕ್ಲಸ್ಟರ್ ಎರಡರಲ್ಲಿರುವ ಶಾಲೆಗಳಾದ ಜಿ ಯು ಪಿ ಎಸ್ ಮಾನಡ್ಕ , ಜಿ ಎಲ್ ಪಿ ಎಸ್ ತರಂತಟ್ಟಡ್ಕ, ಎ ಯು ಪಿ ಎಸ್ ಮುನ್ನಾಡ್, ಜಿ ಎಲ್ ಪಿ ಎಸ್ ಬೇಡಡ್ಕ ನ್ಯೂ, ಜಿ ವಿ ಎಚ್ ಎಸ್ ಎಸ್ ಇರಿಯಣ್ಣಿ ಎಂಬೀ ಶಾಲೆಗಳ ಸಾರ್ವಜನಿಕ ಅಹವಾಲು ಫೆಬ್ರವರಿ 17ರಂದು ಬೆಳಗ್ಗೆ 11 ಗಂಟೆಗೆ ಎ. ಯು. ಪಿ. ಎಸ್ ಮುನ್ನಾಡ್‍ನಲ್ಲಿ ನಡೆಯಲಿದೆ. ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕ ವಿಚಾರಣೆಯಲ್ಲಿ ಜನ ಪ್ರತಿನಿಧಿಗಳು, ಪಿಟಿಎ ಅಧಿಕಾರಿಗಳು, ಪೆÇೀಷಕರು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ. ಕಿಲಾ ಜಿಲ್ಲಾ ಸಂಚಾಲಕರು ಮತ್ತು ಸಾಮಾಜಿಕ ಲೆಕ್ಕ ಪರಿಶೋಧನಾ ಸಂಚಾಲಕರು ಭಾಗವಹಿಸುತ್ತಿದ್ದಾರೆ.
.





