HEALTH TIPS

ಮುನ್ನಾಡ್ ಪೀಪಲ್ಸ್ ಕಾಲೇಜಿನಲ್ಲಿ 'ಪೀಪಲ್ಸ್ ಮೆಗಾ ಫೆಸ್ಟ್ 2ಕೆ23'


                ಕಾಸರಗೋಡು : ಕೋಪರೇಟಿವ್ ಎಜುಕೇಶನಲ್ ಸೊಸೈಟಿಯ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿರುವ ಮುನ್ನಾಡ್ ಇಎಂಎಸ್ ಅಕ್ಷರಗ್ರಾಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುನ್ನಾಡ್ ಪೀಪಲ್ಸ್ ಕೋಆಪರೇಟಿವ್ ಆಟ್ರ್ಸ್ ಮತ್ತು ಸೈನ್ಸ್ ಕಾಲೇಜು ನೇತೃತ್ವದಲ್ಲಿ 'ಪೀಪಲ್ಸ್ ಮೆಗಾ ಫೆಸ್ಟ್ 2ಕೆ23' ಎಂಬ ಮುಕ್ತ ಪ್ರದರ್ಶನ ಫೆಬ್ರವರಿ 15ರಿಂದ 17ರ ವರೆಗೆ ಪಬ್ಲಿಕ್ ಕಾಲೇಜು ಕ್ಯಾಂಪಸ್‍ನಲ್ಲಿ ಜರುಗಲಿರುವುದಾಗಿ ಕಾರ್ಯಾಧ್ಯಕ್ಷ ಹಾಗೂ ಕಾಲೇಜು ಪ್ರಾಂಶುಪಾಲ ಡಾ. ಸಿಕೆ ಲ್ಯೂಕಾಸ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
             ಕೃಷಿ ಉತ್ಪನ್ನಗಳು, ಕೃಷಿ ಉಪಕರಣಗಳು ಮತ್ತು ಕುಟುಂಬಶ್ರೀ ಉತ್ಪನ್ನಗಳ ವಿವಿಧ ಪ್ರದರ್ಶನ ಬೂತ್‍ಗಳು, ಶೈಕ್ಷಣಿಕ ಕಂಪ್ಯೂಟರ್ ಎಕ್ಸ್ ಪೆÇೀ, ಹೂವಿನ ಗಿಡಗಳ ಪ್ರದರ್ಶನ, ವಿವಿಧ ಪ್ರಕಾಶಕರ ಪುಸ್ತಕ ಮೇಳ, ಛಾಯಾಚಿತ್ರ ಪ್ರದರ್ಶನ, ವಿವಿಧ ಇಲಾಖೆಗಳ ಬೂತ್‍ಗಳು ಮೇಳದಲ್ಲಿ ಕಾರ್ಯಾಚರಿಸಲಿದೆ. ಪೆÇಲೀಸ್ ಠಾಣೆಗಳು, ಅಬಕಾರಿ, ಅಗ್ನಿಶಾಮಕ ದಳ, ಮಕ್ಕಳ ಸಾಹಿತ್ಯ ಸಂಸ್ಥೆ, ಕುಟುಂಬಶ್ರೀ, ದಿನೇಶ್ ಬೀದಿ ಸಹಕಾರಿ ಸಂಘ, ಮಿಲ್ಮಾ, ಖಾದಿ ಮುಂತಾದುವುಗಳು ವಸ್ತುಪ್ರದರ್ಶನದ ಅಂಗವಾಗಿ ಸಿದ್ಧಗೊಳ್ಳಲಿದೆ. ಪ್ರದರ್ಶನದ ಜೊತೆಗೆ ಮಾರಾಟ ಸೌಲಭ್ಯವನ್ನು ಆಯೋಜಿಸಲಾಗುವುದು. ವಿವಿಧ ವಿಚಾರ ಸಂಕಿರಣಗಳು, ಆಯುರ್ವೇದ ಔಷಧಶಿಬಿರಗಳು, ಕಲಾತ್ಮಕ ಕಾರ್ಯಕ್ರಮಗಳು, ಸ್ಪರ್ಧೆಗಳು ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವೂ ಇರುತ್ತದೆ. ಪ್ರದರ್ಶನವು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
          ಮೆಗಾಫೆಸ್ಟ್‍ನಲ್ಲಿ ಬಹಳಷ್ಟು ಕೆಲಸಗಳು ನಡೆಯುತ್ತವೆ. ಸಂಘಟನಾ ಸಮಿತಿಯನ್ನು ರಚಿಸಲಾಗಿದ್ದು, ಸಂಗಮ್ ಅಧ್ಯಕ್ಷ ಎಂ.ಅನಂತನ್ ಅಧ್ಯಕ್ಷರಾಗಿ, ಪಾಯಂ ವಿಜಯನ್  ಜನರಲ್ ಕನ್ವೀನರ್. ವಿವಿಧ ಉಪಸಮಿತಿಗಳನ್ನೂ ರಚಿಸಲಾಗಿದೆ. ಫೆ. 15ರಂದು ಬೆಳಗ್ಗೆ 11ಕ್ಕೆ ಉದುಮ ಶಾಸಕ ಸಿ.ಎಚ್. ಕುಞಂಬು ಮೇಳ ಉದ್ಘಾಟಿಸುವರು ಎಂದು ತಿಳಿಸಿದರು.
            ಸುದ್ದಿಗೋಷ್ಠಿಯಲ್ಲಿ ಸಂಸ್ಥೆ ಅಧ್ಯಕ್ಷ ಎಂ. ಅನಂತನ್,  ನಿರ್ದೇಶಕ ಸಜಿತ್ ಅತಿಯಾಂಬೂರ್, ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಪಾಯಂ ವಿಜಯನ್ ಮತ್ತು ಸುರೇಶ್ ಪಯಂಗನಂ ಉಪಸ್ಥಿತರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries