ನವದೆಹಲಿ: ಸೌದಿ ಅರೇಬಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಈ ವರ್ಷದ ಭಾರತದ ಹಜ್ ಕೋಟಾದಲ್ಲಿ 1,75,025 ಜನರಿಗೆ ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗಿದೆ ಎಂದು ಗುರುವಾರ ಸರ್ಕಾರ ತಿಳಿಸಿದೆ.
ಲೊಕಸಭೆಗೆ ಲಿಖಿತ ಉತ್ತರ ನೀಡಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಅವರು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಹಜ್ ಸಮಿತಿಗಳು ಹಜ್ ಯಾತ್ರೆ ನಿರ್ವಹಣೆಯ ಕುರಿತು ಅನೇಕ ಬಾರಿ ಚರ್ಚೆಗಳನ್ನು ನಡೆಸಿವೆ.





