ಪತ್ತನಂತಿಟ್ಟ: ಕೊಡುಮೊನ್ ಪೋಲೀಸ್ ಠಾಣೆಯಿಂದಲೇ ಇ-ಪಿಒಎಸ್ ಯಂತ್ರದೊಂದಿಗೆ ಆರೋಪಿ ಕಾಲ್ತಿತ್ತ ಘಟನೆ ನಡೆದಿದೆ. ಘಟನೆ ಜನವರಿ 27 ರಂದು ನಡೆದಿದೆ.
ಠಾಣೆಯಲ್ಲಿದ್ದ 20 ಸಾವಿರ ಮೌಲ್ಯದ ಯಂತ್ರವನ್ನು ಕಳವು ಮಾಡಲಾಗಿದೆ. ಘಟನೆಯಲ್ಲಿ ಆರೋಪಿ ಎ.ಬಿ.ಜಾನ್ ಸಿಕ್ಕಿಬಿದ್ದಿದ್ದರೂ ಯಂತ್ರ ಪತ್ತೆಯಾಗಿಲ್ಲ.
ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ್ದಕ್ಕಾಗಿ ಪೆÇಲೀಸರು ವಶಕ್ಕೆ ಪಡೆದಿರುವ ಶಂಕಿತ ಆರೋಪಿ ಎಬಿ ಜಾನ್. ಕುಡಿದ ಅಮಲಿನಲ್ಲಿ ಪೆÇಲೀಸರನ್ನು ವಂಚಿಸಿ ಪಿಒಎಸ್ ಯಂತ್ರದೊಂದಿಗೆ ಕಾಲ್ಕಿತ್ತಿದ್ದ. ದಾರಿಯಲ್ಲಿ ಎಲ್ಲೋ ಬಿಟ್ಟು ಹೋಗಿದ್ದೆ ಎಂದು ಬಂಧಿತ ಆರೋಪಿ ಹೇಳಿಕೆ ನೀಡಿದ್ದಾನೆ.
ಆತ ಹೇಳಿದ ಜಾಗದಲ್ಲಿ ಪೆÇಲೀಸರು ಹುಡುಕಾಟ ನಡೆಸಿದ್ದು, ಯಂತ್ರದ ಒಳಗಿದ್ದ ಕಾಗದಗಳು ಮಾತ್ರ ಪತ್ತೆಯಾಗಿವೆ. ಯಂತ್ರ ಇನ್ನೂ ಪತ್ತೆಯಾಗಿಲ್ಲ.
ಪೋಲೀಸ್ ಠಾಣೆಯಿಂದ ಕಳವು!: ಪತ್ತನಂತಿಟ್ಟ ಪೋಲೀಸ್ ಠಾಣೆಯಿಂದ 20,000 ರೂ ಮೌಲ್ಯದ ಇ-ಪಿಒಎಸ್ ಯಂತ್ರದೊಂದಿಗೆ ಆರೋಪಿ ಪರಾರಿ
0
ಫೆಬ್ರವರಿ 04, 2023





