ತಿರುವನಂತಪುರ: ಇನ್ನು ಮುಂದೆ ರಾಜ್ಯದಲ್ಲಿ ಹರತಾಳ ನಡೆಸುವುದಿಲ್ಲ ಎಂದು ಕಾಂಗ್ರೆಸ್ ಘೋಷಿಸಿದೆ. ಹರತಾಳಕ್ಕೆ ಕಾಂಗ್ರೆಸ್ ವಿರೋಧವಾಗಿದ್ದು, ತಾನು ಅಧ್ಯಕ್ಷರಾಗಿರುವ ಕಾಂಗ್ರೆಸ್ ಇನ್ನು ಮುಂದೆ ಯಾವುದೇ ಹರತಾಳ ಘೋಷಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಕಣ್ಣೂರಿನಲ್ಲಿ ಹೇಳಿದ್ದಾರೆ.
ಹರತಾಳ ನಡೆಸದಿದ್ದರೂ ರಾಜ್ಯ ಬಜೆಟ್ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಸುಧಾಕರನ್ ಘೋಷಿಸಿದರು.
ರಾಜ್ಯದಲ್ಲಿ ನಿನ್ನೆ ಬಜೆಟ್ ಮಂಡನೆಯಾಗಿದ್ದು, ಜನರಿಗೆ ನಿರಾಸೆಗೊಳಿಸಿದೆ ಎಂದು ಅವರು ಹೇಳಿರುವರು. ಬಡವರ ಹಣವನ್ನು ಲೂಟಿ ಮಾಡುವ ಮೂಲಕ ಪಿಣರಾಯಿ ಅದ್ದೂರಿ ಜೀವನ ನಡೆಸುತ್ತಿದ್ದಾರೆ. ಸಿಪಿಎಂ ಡ್ರಗ್ಸ್ ಮಾಫಿಯಾಗೆ ಸಹಾಯ ಮಾಡಲು ಮದ್ಯದ ಬೆಲೆಯನ್ನು ಹೆಚ್ಚಿಸಿದೆ. ತೆರಿಗೆ ಹೆಚ್ಚಿಸಿರುವ ಬಜೆಟ್ ಗೆ ಎಡಪಕ್ಷಗಳೂ ಸ್ಪಂದಿಸಬೇಕು. ಈ ರೀತಿ ಸಾರ್ವಜನಿಕ ಹಣವನ್ನು ಲೂಟಿ ಮಾಡಲು ಸರಕಾರಕ್ಕೆ ಅವಕಾಶ ನೀಡಬಾರದು ಎಂದು ಕಣ್ಣೂರಿನಲ್ಲಿ ಹೇಳಿದರು.
ಇನ್ನು ರಾಜ್ಯದಲ್ಲಿ ಹರತಾಳ ನಡೆಸುವುದಿಲ್ಲ: ಕೆಪಿಸಿಸಿ ಅಧ್ಯಕ್ಷರಿಂದ ಮಹತ್ತರ ಘೋಷಣೆ
0
ಫೆಬ್ರವರಿ 04, 2023
Tags





