ಕಾಸರಗೋಡು |: ಕನ್ನಡದ ಹಿರಿಯ ವಿದ್ವಾಂಸ, ಕನ್ನಡ ಪ್ರಾಧ್ಯಾಪಕ, ದಿ.ಪಿ.ಸುಬ್ರಾಯ ಭಟ್ಟ ಅವರ ಜನ್ಮಶತಮಾನೋತ್ಸವ ಸಮಾರಂಭ ಫೆ. 26ರಂದು ಬೆಳಗ್ಗೆ 9.30ಕ್ಕೆ ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ.
ದಿ.ಪಿ.ಸುಬ್ರಾಯ ಭಟ್ಟ ಅವರ ಜನ್ಮಶತಮಾನೋತ್ಸವ ಸಮಿತಿ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಸಹಯೋಗದೊಮದಿಗೆ ಕಾರ್ಯಕ್ರಮ ಜರುಗಲಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಉದ್ಘಾಟಿಸುವರು. ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಡಾ. ರೆಮಾ ಕೆ. ಅಧ್ಯಕ್ಷತೆ ವಹಿಸುವರು. ಕೇಂದ್ರ ಸಾಹಿತ್ಯ ಅಕಾಡಮಿ ವಿಶ್ರಾಂತ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ ಮಹಾಲಿಂಗೇಶ್ವರ ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ವಿಶ್ರಾಂತ ಪ್ರಾಂಶುಪಾಲೆ ಡಾ. ಪ್ರಮಿಳಾ ಮಾಧವ್ ಅವರ ಸಂಪಾದಕತ್ವದಲ್ಲಿ ಹೊರತರಲಾದ ಸಂಸ್ಮರಣಾ ಕೃತಿ'ಸಾರಥಿ'ಯನ್ನು ಮೈಸೂರು ವಿ.ವಿ ಪ್ರಸಾರಾಂಗ ವಿಶ್ರಾಂತ ನಿರ್ದೇಶಕ ಡಾ. ಆರ್.ವಿ.ಎಸ್ ಸುಂದರಂ ಬಿಡುಗಡೆಗೊಳಿಸುವರು. ಈ ಸಂದರ್ಭ ನಡೆಯುವ ಸಂಸ್ಮರಣಾ ನುಡಿನಮನ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ವಸಂತ ಕುಮಾರ್ ತಾಳ್ತಜೆ ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಿ. ಭಾಟಿಯಾ, ವಿಶ್ರಾಂತ ಪ್ರಾಧ್ಯಾಪಕ ಡಾ. ನಾ.ದಾಮೋದರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಎಸ್. ಸತೀಶ್ ಮನ್ನಿಪ್ಪಾಡಿ, ನಿವೃತ್ತ ಮುಖ್ಯ ಶಿಕ್ಷಕ ಪಿ.ವಿ ಕೇಶವ ಪಾಲ್ಗೊಳ್ಳುವರು.
ಮಧ್ಯಾಹ್ನ ಪ್ರಾಚಾರ್ಯ ದಿ. ಪಿ.ಸುಬ್ರಾಯ ಭಟ್ ಅವರ ಬಗ್ಗೆ ತಯಾರಿಸಲಾದ ಸಾಕ್ಷ್ಯಚಿತ್ರದ ಪ್ರದರ್ಶನ ನಡೆಯುವುದು. ಹಿರಿಯ ಪತ್ರಕರ್ತ, ಸಿನಿಮಾ ನಿರ್ಮಾಪಕ ಗಣೇಶ್ ಕಾಸರಗೋಡು ಬೆಂಗಳೂರು ಸಾಕ್ಷ್ಯಚಿತ್ರದ ಬಗ್ಗೆ ಮಾತನಾಡುವರು. ನಂತರ ಕಾವ್ಯ ವಾಚನ-ವ್ಯಾಖ್ಯಾನ ನಡೆಯುವುದು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಶ್ರೀಶ ದೇವಪೂಜಿತ್ತಾಯ ಅಧ್ಯಕ್ಷತೆ ವಹಿಸುವರು.
26ರಂದು ಕನ್ನಡದ ಹಿರಿಯ ವಿದ್ವಾಂಸ, ಪ್ರಾಧ್ಯಾಪಕ ಪ್ರೊ.ಪಿ.ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಸಮಾರಂಭ
0
ಫೆಬ್ರವರಿ 14, 2023
Tags




