ಕಾಸರಗೋಡು: ಬಂಟರ ಸಂಘದ ಮಧೂರು,ಕೂಡ್ಲು,ಮಾಯಿಪ್ಪಾಡಿ,ಸಿರಿಬಾಗಿಲು ಘಟಕಗಳ ಹಾಗೂ ಮಧೂರು ಸಮಿತಿ ಸದಸ್ಯರ ಸಭೆಯು ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯಲ್ಲಿರುವ ಬಾಲಕೃಷ್ಣ ರೈಗಳ ನಿವಾಸದಲ್ಲಿ ಜರಗಿತು. ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಮಧೂರಿನ ಪರಕ್ಕಿಲದಲ್ಲಿ ಸಂಘಕ್ಕಾಗಿ ಖರೀದಿಸಿದ 45 ಸೆಂಟ್ ಸ್ಥಳದಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಕಾರ್ಯದರ್ಶಿ ಗಣೇಶ್ ರೈ ನಾಯಕೋಡು ಮಾಹಿತಿ ನೀಡಿದರು. ಮಧೂರು ಪಂಚಾಯತ್ ಮತ್ತು ಮೊಗ್ರಾಲ್‍ಪುತ್ತೂರು ಪಂಚಾಯಿತಿಗಳಲ್ಲಿನ ಸಮಾಜ ಬಾಂಧವರನ್ನು ಸಂಪರ್ಕಿಸಿ ಮುಂದಿನ ಅಭಿವೃದ್ಧಿ ಕಾರ್ಯಗಳನ್ನು ನಡೆಸುವರೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭ ಸ್ಥಳ ಖರೀದಿ ಹಾಗು ಇನ್ನಿತರ ವಿಷಯಗಳಲ್ಲಿ ಕಾನೂನಾತ್ಮಕ ಸಲಹೆ,ಸಹಾಯಗಳನ್ನು ನೀಡಿ ಸಹಕರಿಸಿದ ಕಾಸರಗೋಡು ಜಿಲ್ಲಾ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ,,ಮಂಗಳೂರು ಮಾತೃ ಸಂಘದ ಕಾರ್ಯಕಾರೀ ಸಮಿತಿ ಸದಸ್ಯ ವಕೀಲ ಸದಾನಂದ ರೈ ಹಾಗೂ ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಅವರನ್ನು ಶಾಲು ಹೊದೆಸಿ ಗೌರವಿಸಲಾಯಿತು.
ವಲಯ ಸಂಘದ ಅಥ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಸುಬ್ಬಣ್ಣ ಆಳ್ವ ಅವರು ಕಟ್ಟಡ ನಿರ್ಮಾಣದ ಬಗ್ಗೆ ಎಲ್ಲರ ಸಹಕಾರ ಯಾಚಿಸಿದರು. ಅಧ್ಯಕ್ಷ ರಾಮಕೃಷ್ಣ ಆಳ್ವ ಮತ್ತು ಕಾರ್ಯದರ್ಶಿ ಗಣೇಶ್ ರೈ ಅವರು ತಮ್ಮ ಕೊಡುಗೆಗಳನ್ನು ಪ್ರಕಟಿಸಿದರು. ಉಮೇಶ ಶೆಟ್ಟಿ, ಅಶೋಕ್ ರೈ, ಕೃಷ್ಣ ಪ್ರಸಾದ್ ಆಳ್ವ ಮಧೂರು, ಬಾಲಕೃಷ್ಣ ಮಧೂರು, ಚಂದ್ರಮೋಹನ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸತೀಶ್ ಆಳ್ವ ಕುತ್ತಾರು ಗುತ್ತು, ಬಾಲಕೃಷ್ಣ ರೈ, ಸಂತೋಷ್ ರೈ ಗಂಗೆ ಉಪಸ್ಥಿತರಿದ್ದರು. ರೋಹಿತಾಕ್ಷಿ ಬಿ.ರೈ ಸ್ವಾಗತಿಸಿದರು. ಅಶೋಕ್ ರೈ ವಂದಿಸಿದರು.
ಬಂಟರ ಸಂಘ ಮಧೂರು ಸಮಿತಿ ಸದಸ್ಯರ ಸಭೆ, ಅಭಿನಂದನೆ
0
ಫೆಬ್ರವರಿ 14, 2023
Tags





