ಉಪ್ಪಳ: ತೇವಭೂಮಿಯ ದಿನದ ಅಂಗವಾಗಿ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಯ ವಿದ್ಯಾರ್ಥಿಗಳು ಕೊಂಡೆವೂರಿನ ವಿಶಾಲ ಬಯಲು ಮತ್ತು ಪರಿಸರಕ್ಕೆ ಭೇಟಿ ನೀಡಿತು. ಆದ್ರ್ರ ಭೂಮಿಯ ಸಂರಕ್ಷಣೆಯ ಜೊತೆಗೆ ಆವಾಸ ವ್ಯವಸ್ಥೆಯನ್ನು ಪರಿಪೋಷಿಸಿ ಪೃಕೃತಿ ಸಮತೋಲನ ಕಾಪಾಡಬೇಕೆಂದು ಶಿಕ್ಷಕಿ ರೇವತಿ ತಿಳಿಸುವುದರ ಜೊತೆಗೆ ಆರ್ದ್ರ ದಿನ ಅಗತ್ಯತೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಕಾಮಧೇನು ಗೋಶಾಲೆ ಹಾಗೂ ನಕ್ಷತ್ರ ವನವನ್ನು ವೀಕ್ಷಿಸಲಾಯಿತು. ಬಳಿಕ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಯವರು ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಕೃಷಿ ಹಾಗೂ ಗೋಸಾಕಾಣೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ರಾವ್ ಚಿಗುರುಪಾದೆ ಸ್ವಾಗತಿಸಿ, ಹಿರಿಯ ಶಿಕ್ಷಕಿ ಅಬ್ಸ ವಂದಿಸಿದರು.
ಮುಳಿಂಜ ಶಾಲೆಯ ನೇತೃತ್ವದಲ್ಲಿ ತೇವಭೂಮಿ ದಿನಾಚರಣೆ
0
ಫೆಬ್ರವರಿ 14, 2023
Tags




.jpg)
