ಪೆರ್ಲ: ಸರ್ಕಾರದ ಕಾರ್ಖಾನೆ ನಿಯಮಗಳನ್ನು ನಿರ್ಲಕ್ಷಿಸಿಸಿ ಜನರ ಜೀವನಕ್ಕೆ ಮಾರಕವಾಗಿರುವ ಬಾಳೆಮೂಲೆಯ ಗೆರಟೆ ಇದ್ದಿಲು ತಯಾರಿ ಘಟಕದ ವಿರುದ್ಧ ಕ್ರಿಯಾ ಸಮಿತಿ ವತಿಯಿಂದ ಬೃಹತ್ ಜನ ಒಗ್ಗೂಡಿ ಪ್ರತಿಭಟನಾ ಮಾರ್ಚ್ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನು ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿ ಮಾತನಾಡಿ, ಪರಿಸರ ಮಾಲಿನ್ಯ ಹಾಗೂ ಜನ ರಿಗೆ ಆನಾರೋಗ್ಯ ಸೃಷ್ಠಿಸುವ ಉದ್ದಿಮೆಗೆ ಪಂಚಾಯತು ಆಸ್ಪದ ನೀಡದಿದ್ದು ಉನ್ನತ ಮಟ್ಟದಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ಜನರೊಂದಿಗೆ ಸ್ಥಳೀಯಾಡಳಿತ ಸಿದ್ಧ ಎಂದರು. ಪಂ.ಸದಸ್ಯ ಹಾಗೂ ಕ್ರಿಯಾ ಸಮಿತಿ ಅಧ್ಯಕ್ಷ ಶಶಿಧರ ಕುಮಾರ್ ಪಿ.ಕೆ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿಯಾಗಿ ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಟಿ.ಎಂ.ಎ.ಕರೀಂ ಸಭೆಯನ್ನುದ್ದೇಶಿ ಮಾತನಾಡಿ, ಸÀರ್ಕಾರಿ ನಿಯಮ ನಿರ್ಲಕ್ಷನೀಯ ಉದ್ಯಮದ ವಿರುದ್ಧ ಜನಪರ ವಾದಗಳೊಂದಿಗೆ ಹೋರಾಟ ನಡೆಸಲು ಸಿಪಿಐಎಂ ಪಕ್ಷವೂ ಸದಾ ಬದ್ಧವಾಗಿದ್ದು ಮುಂದಿನ ಸೂಚನೆ ಬರುವವರೆಗೆ ಉದ್ದಿಮೆಯ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಡವರಲ್ಲಿ ಒತ್ತಾಯಿಸಲಾಗಿದೆ ಎಂದರು.
ಎಣ್ಮಕಜೆ ಗ್ರಾ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಸ್ಥಳೀಯ ಸಾಮಾಜಿಕ ಪಕ್ಷ ಸಂಘಟನೆಗಳ ಮುಖಂಡರಾದ ಸುಧಾಕರ ಮಾಸ್ತರ್, ಮಂಜುನಾಥ ಪಿ.ಕೆ, ವಿಜಯ ಕುಮಾರ್ ಮೊದಲಾದವರು ಮಾತನಾಡಿದರು. ಕ್ರಿಯಾ ಸಮಿತಿ ಸಂಚಾಲಕ
ಉಮೇಶ್ ಸಭೆಯಲ್ಲಿ ಉಪಸ್ಥಿತರಿದ್ದರು. ಬಾಳೆಮೂಲೆಯಿಂದ ಅನ್ತೊಟ್ಟಿಯ ವರೆಗೆ ಘೋಷಣೆಗಳನ್ನು ಕೂಗಿಕೊಂಡು ಬಂದ ನೂರಾರು ಪ್ರತಿಭಟನಾಕಾರರು ಕರಪತ್ರವನ್ನು ಪ್ರದರ್ಶಿಸಿದರು.




.jpg)
.jpg)
