ಕಾಸರಗೋಡು: ಕಾಞಂಗಾಡ್ ವೈರಾಗ್ ಭವನ ಸಭಾಂಗಣದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಶಾಸಕ ಇ.ಚಂದ್ರಶೇಖರನ್ ನೆರವೇರಿಸಿದರು. ಕಾಞಂಗಾಡು ನಗರಸಭಾ ಸದಸ್ಯೆ ಕುಸುಮಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ದಿನಾಚರಣೆಯ ಸಂದೇಶ ನೀಡಿದರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಕೆ.ವಿ.ಪ್ರಕಾಶ್, ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಿಜಿತ್ ಕೃಷ್ಣನ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಟಿ.ಪಿ.ಅಮೀನಾ, ಕಿರಿಯ ಆಡಳಿತ ವೈದ್ಯಾಧಿಕಾರಿ ಡಾ.ನಿರ್ಮಲ್, ಎನ್‍ಸಿಡಿ ಸಹಾಯಕ ನೋಡಲ್ ಅಧಿಕಾರಿ ಡಾ.ಪ್ರಸಾದ್ ಥಾಮಸ್, ಜಿಲ್ಲಾ ನರ್ಸಿಂಗ್ ಅಧಿಕಾರಿ ಪಿ.ಎಂ.ಮೇರಿಕುಟ್ಟಿ, ತಾಂತ್ರಿಕ ಸಹಾಯಕ ಪಿ.ಕುಂಞÂ ಕೃಷ್ಣನ್ ನಾಯರ್, ಜಿಲ್ಲಾ ವಿ.ಬಿ.ಡಿ.ಸಿ ಅಧಿಕಾರಿ ಎಂ.ವೇಣು ಗೋಪಾಲ್ ಮಾತನಾಡಿದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠ ಸ್ವಾಗತಿಸಿ, ಕಾಞಂಗಾಡು ಜಿಲ್ಲಾ ಆಸ್ಪತ್ರೆ ಪಿಎಚ್‍ಎನ್ ಎಂ.ದಾಕ್ಷಾಯಣಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಕಾಞಂಗಾಡು ಹಳೆ ಬಸ್ ನಿಲ್ದಾಣ ಪ್ರದೇಶದಿಂದ ವ್ಯಾಪಾರಭವನ ಸಭಾಂಗಣದವರೆಗೆ ನಡೆದ ಜಾಗೃತಿ ಜಾಥಾ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ನಡೆಸಿದ ಫ್ಲ್ಯಾಶ್ ಮಾಬ್ ಗಮನ ಸೆಳೆದವು. ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಶಾಸಕ ಇ.ಚಂದ್ರಶೇಖರನ್ ತಂಬಾಕು ನಿವಾರಣಾ ಚಿಕಿತ್ಸಾಲಯಗಳನ್ನು ಉದ್ಘಾಟಿಸಿ ಜಾಗೃತಿ ವಿಡಿಯೋ ಬಿಡುಗಡೆ ಮಾಡಿದರು.
ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ರಾಜು ಮ್ಯಾಥ್ಯೂ ಜಾಗೃತಿ ವಿಚಾರ ಸಂಕಿರಣದಲ್ಲಿ ತರಗತಿ ನಡೆಸಿದರು. ಜಿಲ್ಲಾ ಆರೋಗ್ಯ ಸಂಸ್ಥೆಗಳ ಎಂಎಲ್‍ಎಸ್‍ಪಿ ಶುಶ್ರೂಷಕರು, ಆರೋಗ್ಯ ಕಾರ್ಯಕರ್ತರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ದಿನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ವಿಶ್ವ ಕ್ಯಾನ್ಸರ್ ದಿನ 2022-2024 ರ ಸಂದೇಶವು 'ಕ್ಲೋಸಿಂಗ್ ದಿ ಕೇರ್ ಗ್ಯಾಪ್' ಎಂದಾಗಿದೆ. ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿನ ಅಸಮರ್ಪಕತೆಗಳನ್ನು ನಿವಾರಿಸುವುದು ಮತ್ತು ಚಿಕಿತ್ಸಾ ಕ್ಷೇತ್ರದಲ್ಲಿನ ಕೊರತೆಯನ್ನು ತುಂಬುವುದು ಈ ಸಂದೇಶದ ಉದ್ದೇಶವಾಗಿದೆ. ಈ ಸಂದೇಶವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಮಾಹಿತಿ ನೀಡಿದರು.
ವಿಶ್ವ ಕ್ಯಾನ್ಸರ್ ದಿನಾಚರಣೆ: ಜಿಲ್ಲಾ ಮಟ್ಟದ ಉದ್ಘಾಟನೆ ಹಾಗೂ ಜಾಗೃತಿ ಜಾಥಾ ಆಯೋಜನೆ
0
ಫೆಬ್ರವರಿ 06, 2023
Tags




.jpeg)
