ಕಾಸರಗೋಡು: ಪಿಲಿಕೋಡ್ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಫೆ.20ರಿಂದ ಮಾರ್ಚ್ 1ರವರೆಗೆ ನಡೆಯಲಿರುವ ಸಫಲಮ್ ಆರ್.ಎ.ಆರ್.ಎಸ್ ಕಾರ್ನಿವಲ್ 2023ರ ಅಂಗವಾಗಿ ತೆಂಗಿನ ವಿವಿಧ ಭಾಗಗಳನ್ನು ಬಳಸಿ ಕರಕುಶಲ ವಸ್ತುಗಳ ತಯಾರಿಕೆ ಸ್ಪರ್ಧೆ ನಡೆಸಲಾಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಕಾರ್ಯಕ್ರಮ ಉದ್ಘಾಟಿಸಿದರು. ಪಿಲಿಕೋಡು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಡಾ.ಟಿ.ವನಜ ಅಧ್ಯಕ್ಷತೆ ವಹಿಸಿದ್ದರು. ಪಡನ್ನಕ್ಕಾಡ್ ಕೃಷಿ ಕಾಲೇಜು ನಿಯೋಜಿತ ಡೀನ್ ಡಾ.ಸಜಿತಾ ರಾಣಿ ಮುಖ್ಯ ಭಾಷಣ ಮಾಡಿದರು. ಡಾ.ನಿಶಾ, ವಿ.ಲಕ್ಷ್ಮಿ, ಪಿ.ಕೆ.ರತೀಶ್, ಪಿ.ಅಜಿತ್ ಕುಮಾರ್ ಮಾತನಾಡಿದರು. ಸ್ಪರ್ಧೆಯಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಕಲಾವಿದರಾದ ವಿ.ಪಿ.ನಂದಗೋಪನ್, ಎಂ.ಸುನಿಲ್ ಕುಮಾರ್, ಪಿ.ವಿ.ವಿನೋದನ್, ಪಿ.ಸುರೇಶ್, ವಿಪಿನ್ ಇರಿಟ್ಟಿ, ಟಿ.ಬಾಬುರಾಜ್, ಎಂ.ಕೆ.ಕುಂಞÂಕೃಷ್ಣನ್, ಪಿ.ವಿ.ಮಿಥುನ್ ಮತ್ತು ವಿ.ವೇಣುಗೋಪಾಲನ್ ಭಾಗವಹಿಸಿದ್ದರು.
ಸಫಲಂ ಫಾರ್ಮ್ ಕಾರ್ನಿವಲ್ 2023 ಕ್ರಾಫ್ಟ್ ಸ್ಪರ್ಧೆ: ಜಿಲ್ಲಾಧಿಕಾರಿ ಉದ್ಘಾಟನೆ
0
ಫೆಬ್ರವರಿ 06, 2023
Tags




