ಪೆರ್ಲ: ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ ಭಾವೈಕ್ಯತಾ ಮೆರವಣಿಗೆ ಭಾನುವಾರ ಜರಗಿತು. ಚರ್ಚಿನಲ್ಲಿ ಬೆಳಗ್ಗಿನ ದಿವ್ಯ ಬಲಿ ಪೂಜೆ ಬಳಿಕ ಚರ್ಚಿನ ಧರ್ಮಗುರು ನೇಲ್ಸನ್ ಡಿ.ಆಲ್ಮೇಡಾ ಹಾಗೂ ಪುತ್ತೂರು ಸೈಂಟ್ ಫಿಲೋಮಿನ ಕಾಲೇಜಿನ ನಿರ್ದೇಶಕ ಫಾದರ್ ಜೊಸ್ವಿನ್ ಅವರ ನೇತೃತ್ವದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಸಿಂಗಾರಿ ಮೇಳದ ಚೆಂಡೆ, ಬ್ಯಾಂಡ್ ಸೆಟ್, ಕರೋಲ್ ಗಾಯನ ವಿಶೇಷವಾಗಿ ಗಮನ ಸೆಳೆಯಿತು. ಚರ್ಚಿನ ಪಾಲನ ಸಮಿತಿ ಸದಸ್ಯರು, ವಾಳೆಯ ಗುರಿಕಾರರು, ಧರ್ಮ ಭಗಿನಿಯರು ಹಾಗೂ ನೂರಾರು ಜನ ಕ್ರೈಸ್ತ ಬಾಂಧವರು ಮೆರವಣಿಗೆಯಲ್ಲಿ ಭಾಗಿಗಳಾದರು. ಫೆ.8ರಂದು ಇಗರ್ಜಿಯ ವಾರ್ಷಿಕ ಹಬ್ಬ ಜರಗಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಮಣಿಯಂಪಾರೆ ಸಂತ ಲಾರೆನ್ಸ್ ಇಗರ್ಜಿಯಲ್ಲಿ ಫೆ.8ಕ್ಕೆ ವಾರ್ಷಿಕ ಹಬ್ಬ: ಪೂರ್ವಭಾವಿ ಭಾವೈಕ್ಯತಾ ಮೆರವಣಿಗೆ
0
ಫೆಬ್ರವರಿ 06, 2023
Tags




.jpg)
