ಪೆರ್ಲ : ಕನ್ನಡ ಸಾಹಿತ್ಯ ಲೋಕದ ಸಾಧಕರಾಗಿ ಅಗಲಿದ ನಾಡೋಜ ಸಾರಾ ಅಬೂಬಕ್ಕರ್ ಹಾಗೂ ಡಾ.ಕೆ.ವಿ.ತಿರುಮಲೇಶ್ ಅವರಿಗೆ ನುಡಿ ನಮನದ ಶ್ರದ್ಧಾಂಜಲಿ ಕಾರ್ಯಕ್ರಮ ಪೆರ್ಲದ ಕೆ.ಕೆ.ರಸ್ತೆಯಲ್ಲಿರುವ ಸಾಹಿತಿ ಹರೀಶ್ ಪೆರ್ಲ ಅವರ "ಗುಲಾಬಿ"ಯಲ್ಲಿ ಜರಗಿತು.
ಸಾಹಿತ್ಯಾಭಿಮಾನಿಗಳು ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲೇಖಕ, ಚಿಂತಕ ಟಿ.ಎ.ಎನ್.ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಉಪನ್ಯಾಸಕಿ ಡಾ.ಯು.ಮಹೇಶ್ವರಿ, ಉಪನ್ಯಾಸಕ ಡಾ.ಬಾಲಕೃಷ್ಣ ಹೊಸಂಗಡಿ, ಹಿರಿಯ ಕವಿ,ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಾಹಿತಿ ಹರೀಶ್ ಪೆರ್ಲ,ವಿಜಯ ಕಾನ ಮೊದಲಾದವರು ನುಡಿ ನಮನ ಸಲ್ಲಿಸಿದರು. ಸಾಹಿತಿ ಶಿವಪಡ್ರೆ, ರವಿಂದ್ರನ್ ಪಾಡಿ, ಸುಂದರ ಬಾರಡ್ಕ, ಕವಯತ್ರಿ ನಿರ್ಮಲ ಶೇಷಪ್ಪ, ಕವಿತಾ ಕೂಡ್ಲು, ಸುಭಾಷ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು. ನಳಿನಿ ಸೈಪಂಗಲ್ಲು ಸ್ವಾಗತಿಸಿ, ವನಜಾಕ್ಷಿ ಚಂಬ್ರಕಾನ ವಂದಿಸಿದರು.




.jpg)
.jpg)
