HEALTH TIPS

ಹಾದಿ ತಪ್ಪುವ ಮಕ್ಕಳ ಮನೋಸ್ಥಿತಿಗೆ ಹೆತ್ತವರ ಪಾತ್ರವೂ ಮಹತ್ತರವಾದುದು: ಜಾಗ್ರತೆ ತುರ್ತು ಅಗತ್ಯ: ಋಷಿರಾಜ್ ಸಿಂಗ್


            ತಿರುವನಂತಪುರಂ: ಮೊಬೈಲ್ ಚಟದಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಹೊಸದಿಲ್ಲಿಯಲ್ಲಿ ಆಸ್ಪತ್ರೆ ಆರಂಭಿಸಿದ ಬೆನ್ನಲ್ಲೇ ಕೇರಳದಲ್ಲೂ ಶಾಖೆ ಆರಂಭಿಸುವ ಸಾಧ್ಯತೆ ಹೆಚ್ಚಿದೆ ಎಂದು ಮಾಜಿ ಡಿಜಿಪಿ ರಿಷಿರಾಜ್ ಸಿಂಗ್ ಹೇಳಿದ್ದಾರೆ. ಮಕ್ಕಳು ದಾರಿ ತಪ್ಪಲು ಅವಕಾಶ ಕಲ್ಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ ಎಂದಿರುವರು.
           ಚೈಲ್ಡ್ ಪ್ರೊಟೆಕ್ಟ್ ಟೀಮ್ ಕೇರಳದ 7 ನೇ ವಾರ್ಷಿಕ ಸಮಾರೋಪ ಸಮ್ಮೇಳನದಲ್ಲಿ 'ಸೈಬರ್ ಜಗತ್ತಿನಲ್ಲಿ ಮಕ್ಕಳ ಸುರಕ್ಷತೆ' ಎಂಬ ವಿಷಯದ ಕುರಿತು ಅವರು ಮಾತನಾಡಿದರು.
        ಪೋಷಕರು ತಮ್ಮ ಮಕ್ಕಳನ್ನು ತಮ್ಮ ಆಯ್ಕೆಯ ಗೊಂಬೆಗಳನ್ನಾಗಿ ಮಾಡಲು ಬಯಸುತ್ತಾರೆ. ತನಗೆ ಇಷ್ಟವಿಲ್ಲದ ವಿಷಯಗಳಲ್ಲಿ ವಿದ್ಯಾರ್ಜನೆಗೈಯ್ಯಲು ಲಕ್ಷಗಟ್ಟಲೆ ಹಣ ಕೊಟ್ಟು ಅಡ್ಮಿಷನ್ ಕೊಡಿಸಿದ ತಂದೆ-ತಾಯಿಯ ಹಿತವನ್ನೂ, ಆಸಕ್ತಿಯನ್ನೂ ಗೌರವಿಸದೆ ಕೊಂದು ಹಾಕಲು ಯತ್ನಿಸಿದ ಮಗುವನ್ನು ಮಾತನಾಡಿಸಿದಾಗ ಅರ್ಥವಾದದ್ದು ಭೀಕರವಾದುದು. ನನ್ನ ಆಸಕ್ತಿಗೆ ಮನ್ನಣೆ ಸಿಗಲಿಲ್ಲ ನನಗೆ ವೈದ್ಯನಾಗುವ ಆಸಕ್ತಿ ಇಲ್ಲ. ಇದರಿಂದ ವ್ಯಸನಕ್ಕೆ ಶರಣಾಗಿ ಪ್ರಾಣ ತೆಗೆಯಲು ಕಾರಣವಾಗಿದ್ದು,  ನನ್ನನ್ನು ಈ ರೀತಿ ಮಾಡಲು ನನ್ನ ಹೆತ್ತವರೇ ಕಾರಣ ಎಂಬ ಸತ್ಯ ಬಿಚ್ಚಿಟ್ಟಿದ್ದ ಎಂದು ತಿಳಿಸಿದರು.
           ಸುಮಾರು 2000 ಶಾಲೆಗಳಲ್ಲಿ ತರಗತಿಗಳನ್ನು ತೆಗೆದುಕೊಂಡು ಮಕ್ಕಳೊಂದಿಗೆ ಚರ್ಚಿಸಿ ಬಿಡುಗಡೆಯಾದ ವೈಕಂ ಮೀಡಿ ಪುಸ್ತಕದ ಐದನೇ ಆವೃತ್ತಿಗೆ ಇಂದಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತ್ರಿಶೂರ್, ಕೊಲ್ಲಂ ಮತ್ತು ತಿರುವನಂತಪುರಂ ಜಿಲ್ಲೆಗಳು ಉತ್ತಮ ಪ್ರದರ್ಶನ ನೀಡಿವೆ. ಜರೀನಾ ಅಕ್ಬರ್ ತ್ರಿಶೂರ್ ಅನಿತಾಸುನಿಲ್ ಕೊಲ್ಲಂ ವಿಶಾಲ್ ಆಲಪ್ಪುಳ ಶಿಬು ರಾವುತರ್ ಕೊಲ್ಲಂ ಸುಜಾಮಾಥ್ಯೂ ವಯನಾಡ್ ನಾಸರ್ ಕಪೂರ್ ಪಾಲಕ್ಕಾಡ್ ಅವರು ವಿವಿಧ ಮಕ್ಕಳಿಗೆ ಸಂಸ್ಥೆಗೆ ಪ್ರಶಸ್ತಿಯನ್ನು ನೀಡಿದ ಮಾಜಿ ಡಿಜಿಪಿ ರಿಶಿರಾಜ್ ಸಿಂಗ್ ಅವರಿಂದ ಪುರಸ್ಕøತರಾದರು.
        ತಿರುವನಂತಪುರದ ಜವಾಹರ್ ನಗರ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಸಿ.ಕೆ.ನಾಸರ್ ಕಾಞಂಗಾಡ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬೇಬಿ ಕೆ ಫಿಲಿಪೆÇೀಸ್, ಕಾರ್ಯದರ್ಶಿ ಶಿಬು ರಾವುತರ್ ನಾಸರ್ ಕಪೂರ್ ಸುಜಾಮಾಥ್ಯೂ ಶಿನೇಕೊಚುದೇವಸಿ ಮಾಹೀನಕಣ್ಣವರ ಮತ್ತಿತರರು ಮಾತನಾಡಿದರು.               ಸಂಚಾಲಕ ಆರ್.ಶಾಂತಕುಮಾರ್ ವಂದಿಸಿದರು. ಮಕ್ಕಳ ರಕ್ಷಣಾ ತಂಡವು ಕಳೆದ ಏಳು ವರ್ಷಗಳಿಂದ ಕೇರಳ, ಇತರ ರಾಜ್ಯಗಳು ಮತ್ತು ವಿದೇಶಗಳಲ್ಲಿ ಮಕ್ಕಳ ಕಲ್ಯಾಣ ಮತ್ತು ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾಗಿದೆ.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries