HEALTH TIPS

ರಾಷ್ಟ್ರೀಯ ನೃತ್ಯ ಮತ್ತು ಸಂಗೀತ ಉತ್ಸವದ ಸಮಾರೋಪ: ಕಲಾಮಂಡಲಂನ ಮುಖಮಂಟಪದಲ್ಲಿ ಡಿಜೆ ಪಾರ್ಟಿ: ವ್ಯಾಪಕ ಆಕ್ರೋಶ


             ತ್ರಿಶೂರ್: ರಾಷ್ಟ್ರೀಯ ನೃತ್ಯ ಮತ್ತು ಸಂಗೀತ ಉತ್ಸವ 'ನಿಲಾ'ದ ಸಮಾರೋಪ ದಿನದಂದು ಕೇರಳ ಕಲಾಮಂಡಲದ ಪವಿತ್ರ ಮುಖಮಂಟಪದಲ್ಲಿ  ಡಿಜೆ ಪಾರ್ಟಿ ಏರ್ಪಡಿಸಲಾಗಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.
           ಡಿಜೆ ಪಾರ್ಟಿಯಲ್ಲಿ ಕಲಾಮಂಡಲಂ ಉಪಕುಲಪತಿ ಮತ್ತು ರಿಜಿಸ್ಟ್ರಾರ್‍ನ ಪ್ರಭಾರ ವ್ಯಕ್ತಿಯೂ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಡಿಜೆ ಪಾರ್ಟಿ ಬೆಳಕಿಗೆ ಬಂದ ನಂತರ, ಕಲಾವಿದರ ಗುಂಪೆÇಂದು ಈ ಬಗ್ಗೆ ತನಿಖೆಗೆ ಒತ್ತಾಯಿಸಿ ಸಂಸ್ಕøತಿ ಸಚಿವರಿಗೆ ದೂರು ಸಲ್ಲಿಸಿದೆ.
        ಕಳೆದ ತಿಂಗಳು  21ರಿಂದ 30ರವರೆಗೆ ಕೇರಳ ಕಲಾಮಂಡಲದಲ್ಲಿ ರಾಷ್ಟ್ರೀಯ ಸಂಗೀತೋತ್ಸವ ನಡೆದಿತ್ತು. ಕಾರ್ಯಕ್ರಮದ ಸಮಾರೋಪವನ್ನು ಲೋಕೋಪಯೋಗಿ ಸಚಿವ ಪಿ.ಎ.ಮುಹಮ್ಮದ್ ರಿಯಾಝ್ ಉದ್ಘಾಟಿಸಿದ್ದರು. ಮುಖಮಂಟಪದಲ್ಲಿ  ನಡೆದ ಸಮಾರೋಪ ಸಮಾರಂಭದ ಬಳಿಕ ಡಿಜೆ ಪಾರ್ಟಿ ನಡೆದಿತ್ತು.
            ರಾಷ್ಟ್ರೀಯ ಸಂಗೀತ ಉತ್ಸವದಲ್ಲಿ ಮೋಹಿನಿಯಾಟ್ಟಂ, ಭರತನಾಟ್ಯ, ಕೂಚಿಪುಡಿ, ಕಥಕ್, ಒಡಿಸ್ಸಿ, ಯಕ್ಷಗಾನ, ತಿರಯಾಟ್ಟಂ, ಚವಿಟ್ಟುನಾಟಕಂ, ನಾಟಕಗಳು, ತೆಯ್ಯಂ  ಮತ್ತು ಬುಡಕಟ್ಟು ನೃತ್ಯ ಮತ್ತು ಸಂಗೀತ ಸೇರಿದಂತೆ ಭಾರತೀಯ ಕಲೆಗಳನ್ನು ಉತ್ತೇಜಿಸುವ ಪ್ರದರ್ಶನಗಳು ನಡೆದಿತ್ತು.  ಮಹಾಕವಿ ವಳ್ಳತ್ತೋಳ್ ಅವರು ಗುರುಕುಲ ಪರಿಕಲ್ಪನೆಯಡಿ  ಕಲೆಗಳನ್ನು ಕಲಿಸಲು ಕೇರಳ ಕಲಾಮಂಡಲಂ ಸ್ಥಾಪಿಸಿದ್ದರು. ಕಲಾಮಂಡಲದ ಪ್ರಮುಖ ಮುಖಮಂಟಪದಲ್ಲಿ ಡಿಜೆ ಪಾರ್ಟಿ ನಡೆದಿರುವುದಕ್ಕೆ ಕಲಾವಿದರ ಗುಂಪು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries