HEALTH TIPS

ಚಲಿಸುತಿದ್ದ ಕಾರಿಗೆ ಬೆಂಕಿ: ಹೊತ್ತಿ ಉರಿದ ಕಾರು : ಸುಟ್ಟು ಕರಕಲಾದ ಗರ್ಭಿಣಿ ಮಹಿಳೆ ಹಾಗೂ ಪತಿ


          ಕಣ್ಣೂರು: ಕಣ್ಣೂರು ಜಿಲ್ಲಾ ಆಸ್ಪತ್ರೆ ಪರಿಸರದಲ್ಲಿ ಸಂಚರಿಸುತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಗರ್ಭಿಣಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.
           ಕಾರಿನಲ್ಲಿ ಆರು ಮಂದಿ ಇದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದೆ. 4 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
          ಗರ್ಭಿಣಿ ಮಹಿಳೆ ಹಾಗೂ ಕಾರು ಚಲಾಯಿಸುತಿದ್ದ ಆಕೆಯ ಪತಿ ಸಾವನ್ನಪ್ಪಿದ್ದಾರೆ.  ಕುಟ್ಯಾಟೂರು ನಿವಾಸಿ ರೀಶಾ (26) ಹಾಗೂ ಆಕೆಯ ಪತಿ ಪ್ರೀಜಿತ್ (32) ಸಾವನ್ನಪ್ಪಿದ ದುರ್ದೈವಿಗಳು.
           ಮಹಿಳೆಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸಾವನ್ನಪ್ಪಿದವರು ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದರು. ಹಿಂದೆ ಇದ್ದವರನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ದಾಖಲಾಗಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries