ಬದಿಯಡ್ಕ: ಕನ್ನಡದ ಉಳಿವು ಕನ್ನಡದ ಬಳಕೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಮೇಲಿದೆ. ನಿರಂತರ ಉತ್ತಮವಾದಂತಹ ಕಾರ್ಯಕ್ರಮಗಳನ್ನು ಕನ್ನಡಿಗರು ಒಗ್ಗೂಡಿ ನಡೆಸಿಕೊಡಬೇಕು. ಭಾಷೆ ಉಳಿಯಬೇಕಾದರೆ ಅದನ್ನು ಆಡುವ ಭಾಷಾ ಸಂಸ್ಕøತಿಯನ್ನು ತಿಳಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ರಂಗಸಿರಿ ವೇದಿಕೆಯಿಂದ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದು ನೃತ್ಯ ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಹೇಳಿದರು.
ಅವರು ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ಸಹಯೋಗದಲ್ಲಿ ನಡೆದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಗ್ರಾಮ ಪರ್ಯಟನೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ರಂಗಸಿರಿ ವೇದಿಕೆಯ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ವಾರ್ಡ್ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ಮತ್ತು ಯಕ್ಷಗಾನ ಅರ್ಥಧಾರಿ ಲಕ್ಷ್ಮಣ ಪ್ರಭು ಕರಿಂಬಿಲ ಉಪಸ್ಥಿತರಿದ್ದರು.
ಡಾ.ಸ್ನೇಹ ಪ್ರಕಾಶ್ ಪೆರ್ಮುಖ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ವಿದುಷಿ ಗೀತಾ ಸಾರಡ್ಕ ವಂದಿಸಿದರು. ರಂಗಸಿರಿ ವೇದಿಕೆಯ ಕಾರ್ಯದರ್ಶಿ ಡಾ.ಶ್ರೀಶ ಕುಮಾರ್ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ವಿಚಾರಗೋಷ್ಠಿಯಲ್ಲಿ ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿ ಕುರಿತು ಪ್ರಬಂಧವನ್ನು ಶಂಕರ್ ಸಾರಡ್ಕ ಮಂಡಿಸಿದರು. ಗಡಿನಾಡ ವಿದ್ಯಾರ್ಥಿಗಳ ಮೇಲೆ ಯಕ್ಷಗಾನದ ಪ್ರಭಾವ ಈ ಕುರಿತು ಅಭಿಜ್ಞಾ ಬೊಳುಂಬು ಪ್ರಬಂಧ ಮಂಡಿಸಿದರು. ಮಲಾರ್ ಜಯರಾಮ ರೈ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಸುಜಾತಾ ಮಾಣಿಮೂಲೆ ಗೋಷ್ಠಿಯನ್ನು ನಿರೂಪಿಸಿದರು. ಯುವ ಕವಿಗಳು ಕವಿತಾ ವಾಚನ ನಡೆಸಿಕೊಟ್ಟರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ತಾಳಮದ್ದಳೆ ಅಗ್ರಪೂಜೆ ಹಿರಿಯ ಮತ್ತು ಕಿರಿಯ ಕಲಾವಿದರ ಕೂಡುವಿಕೆಯಿಂದ ನಡೆಯಿತು.
ಕನ್ನಡದ ಉಳಿವು ಕನ್ನಡದ ಬಳಕೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಮೇಲಿದೆ:ವಿದುಷಿ ಅನುಪಮಾ ರಾಘವೇಂದ್ರ ಉಡುಪಮೂಲೆ
0
ಫೆಬ್ರವರಿ 08, 2023




.jpg)
