ಮಂಜೇಶ್ವರ: ಇತಿಹಾಸ ಪ್ರಸಿದ್ದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವ ಫೆಬ್ರವರಿ 11 ರಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಬೆಳಿಗ್ಗೆ 7ರಿಂದ ಉಷಃಕಾಲ ಪೂಜೆ, ಗಣಹೋಮ, ನವಕ ಕಲಶಾಭಿಷೇಕ, ಏಕಾದಶ ರುದ್ರಾಭಿಷೇಕ, 10.30ರಿಂದ ಹರಿಕಥಾ ಸತ್ಸಂಗ ‘ಕಲಾರತ್ನ ಶಂನಾಡಿಗ ಕುಂಬಳೆ ಇವರ ಶಿಷ್ಯ ಮಾ.ಸಾತ್ವಿಕ್ ಕೃಷ್ಣ ತುಂಗ ಮತ್ತು ತಂಡದವರಿಂದ’ ಜರಗಲಿದೆ. ಮಧ್ಯಾಹ್ನ 12ರಿಂದ ಮಹಾಪೂಜೆ, ಶ್ರೀದೇವರಬಲಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರಗಲಿದೆ. ಸಂಜೆ 6ರಿಂದ ಭರತನಾಟ್ಯ ಕಾರ್ಯಕ್ರಮ ರಾಧಿಕಾ ಶೆಟ್ಟಿ ನೃತ್ಯಾಂಗನ್ ಮಂಗಳೂರು ಇವರ ಶಿಷ್ಯೆ ಕುಮಾರಿ ಅದಿತಿಲಕ್ಷ್ಮಿ ಭಟ್ ಮಂಗಳೂರು ಇವರಿಂದ. ರಾತ್ರಿ 7ಕ್ಕೆ ರಂಗಪೂಜೆ, 8ರಿಂದ ಭೂತಬಲಿ ಉತ್ಸವ, ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಜರಗಲಿದೆ ಎಂದು ಕ್ಷೇತ್ರ ಪ್ರಕಟಣೆ ತಿಳಿಸಿದೆ.
ಫೆ.11. ಚಿಗುರುಪಾದೆ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ
0
ಫೆಬ್ರವರಿ 08, 2023
Tags




.jpg)
