ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎಯುಪಿ ಶಾಲೆಯ 2022-23 ನೇ ಸಾಲಿನ ವಾರ್ಷಿಕೋತ್ಸವ ಜರಗಿತು. ಶಾಲಾ ಸಂಚಾಲಕಿ ರಾಜೇಶ್ವರಿ ಎಸ್.ರಾವ್ ಧ್ವಜಾರೋಹಣಗೈದರು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಾವರ ಜಿಎಚ್ ಎಸ್ ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ ಎಂ.ಎಸ್ ಶುಭಹಾರೈಸಿದರು. ಮಂಜೇಶ್ವರ ಬಿ ಆರ್.ಸಿ ಕ್ಷೇತ್ರ ನಿರೂಪಣಾಧಿಕಾರಿ ವಿಜಯ ಕುಮಾರ್.ಪಿ, ಶಾಲಾ ಆಡಳಿತ ಸಲಹೆಗಾರ ಶ್ರೀಧರ್.ರಾವ್.ಆರ್.ಎಂ, ಶಾಲಾ ಸಂಚಾಲಕಿ ರಾಜೇಶ್ವರಿ ಎಸ್.ರಾವ್, ಪಿ.ಟಿ.ಎ ಅಧ್ಯಕ್ಷ ಕೃಷ್ಣಪ್ರಸಾದ್, ಎಂಪಿಟಿಎ ಅಧ್ಯಕ್ಷೆ ಸೌಮ್ಯ ಪ್ರಕಾಶ್ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಶಾಲಾ ನಿವೃತ್ತ ಅಧ್ಯಾಪಕ ವಸಂತ ಭಟ್ ತೊಟ್ಟೆತ್ತೋಡಿ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ಹಾಗೂ ಸನ್ಮಾನಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 2022-23 ಸಾಲಿನ ರಾಜ್ಯ ಮಟ್ಟದ ಕಲೋತ್ಸವದ ಹಿಂದಿ ಕಥಾರಚನಾ ಸ್ಪರ್ಧೆಯಲ್ಲಿ ‘ಎ’ ಗ್ರೇಡ್ ಪಡೆದ ಶಾಲಾ ಹಳೆವಿದ್ಯಾರ್ಥಿ ಮಹಾಲಕ್ಷ್ಮಿ.ಬಿ.ಎಸ್ ಇವರನ್ನು ಅಭಿನಂದಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ವಾರ್ಷಿಕ ವರದಿ ವಾಚಿಸಿದರು.ಕಾರ್ಯಕ್ರಮದಲ್ಲಿ ತರಗತಿಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕ ನಾರಾಯಣ. ಯು ಸ್ವಾಗತಿಸಿ, ಪದ್ಮಾವತಿ.ಎಂ ವಂದಿಸಿದರು. ಅಧ್ಯಾಪಿಕೆ ಸ್ವಾತಿ. ಟಿ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ರಂಗೇರಿದವು.
ವಿದ್ಯಾವರ್ಧಕ ಶಾಲಾ ವಾರ್ಷಿಕೋತ್ಸವ: ನಿವೃತ್ತ ಅಧ್ಯಾಪಕರಿಗೆ ಸನ್ಮಾನ
0
ಫೆಬ್ರವರಿ 08, 2023
Tags




.jpg)
