ಕಾಸರಗೋಡು: ಸಿಪಿಎಂ ವಾಟ್ಸ್ ಆಪ್ ಗ್ರೂಪ್ ನಲ್ಲಿ ಲೋಕಲ್ ಕಾರ್ಯದರ್ಶಿಯ ಅಶ್ಲೀಲ ಆಡಿಯೋ ಸಂದೇಶ ವ್ಯಾಪಕ ಚರ್ಚೆಗೊಳಗಾಗಿದೆ. ಕಾಸರಗೋಡು ಪಾಕ್ಕಂ ಲೋಕಲ್ ಕಾರ್ಯದರ್ಶಿ ರಾಘವನ್ ವೆಲ್ತೋಳಿ ಮಹಿಳೆಯರು ಸೇರಿದಂತೆ ಸಕ್ರಿಯವಾಗಿರುವ ಗುಂಪಿಗೆ ಅಶ್ಲೀಲ ಸಂದೇಶ ರವಾನಿಸಿದ್ದಾರೆ.
ಘಟನೆ ವಿವಾದಕ್ಕೀಡಾಗುತ್ತಿದ್ದಂತೆ ರಾಘವನ್ ಸಮಜಾಯಿಷಿ ನೀಡಿದ್ದು, ಪತ್ನಿಗೆ ಕಳುಹಿಸಿದ್ದು, ಗುಂಪು ಬದಲಾಗಿದೆ ಎಂಬ ಉತ್ತರ ಬಂದಿದೆ.
ರಾಘವನ್ ವೆಲ್ತೋಳಿ ಪೆರಿಯ ಜೋಡಿ ಕೊಲೆ ಪ್ರಕರಣದ ಆರೋಪಿ. ಪ್ರಕರಣದ ವಿಚಾರಣೆಗಾಗಿ ರೈಲಿನಲ್ಲಿ ಎರ್ನಾಕುಳಂಗೆ ತೆರಳುತ್ತಿದ್ದಾಗ ಅಶ್ಲೀಲ ಸಂದೇಶ ರವಾನೆಯಾಗಿದೆ. ರಾಘವನ್ ವೆಲ್ತೋಳಿ ಈ ಹಿಂದೆ ಇದೇರೀತಿಯ ದುರ್ನಡತೆಗಾಗಿ ಶಿಸ್ತು ಕ್ರಮ ಎದುರಿಸಿದ್ದರು. ಅವರನ್ನು ಪ್ರಾದೇಶಿಕ ಮಟ್ಟದ ಸ್ಥಳೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಬೇಕು ಎಂದು ಪಕ್ಷ ಒತ್ತಾಯಿಸುತ್ತಿದೆ.
ರಾಘವನ್ ವೆಲ್ತೋಳಿ ಅವರು ಕಳುಹಿಸಿರುವ ಸಂದೇಶ ಇದೀಗ ಹಲವು ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ ಎಂದು ವರದಿಯಾಗಿದೆ.
ಸಿಪಿಎಂ ವಾಟ್ಸಾಪ್ ಗುಂಪಿನಲ್ಲಿ ಲೋಕಲ್ ಕಾರ್ಯದರ್ಶಿಯಿಂದ ಅಶ್ಲೀಲ ಸಂದೇಶ; ಪತ್ನಿಗೆ ಕಳುಹಿಸಿದ್ದು ತಪ್ಪಿ ಬಂದಿದ್ದೆಂದು ವಿವರಣೆ
0
ಫೆಬ್ರವರಿ 04, 2023





