ಕಾಸರಗೋಡು: ಕನ್ನಡದ ಹಿರಿಯ ವಿದ್ವಾಂಸ, ಕನ್ನಡ ಪ್ರಾಧ್ಯಾಪಕ, ಪ್ರಾಧ್ಯಾಪಕ ದಿ.ಪಿ.ಸುಬ್ರಾಯಭಟ್ಟ ಅವರ ಜನ್ಮಶತಮಾನೋತ್ಸವ ಸಮಿತಿ ಸಭೆ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ನಡೆಯಿತು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಪ್ರೊ.ಪಿ.ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. 2023 ಫೆಬ್ರವರಿ 26ರಂದುಭಾನುವಾರ ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಸುಬ್ರಾಯಭಟ್ ಜನ್ಮಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ವಿವಿಧ ಉಪಸಮಿತಿಗಳ ಕಾರ್ಯಚಟುವಟಿಕೆಗಳ ಕುರಿತು ಅವಲೋಕನ ನಡೆಸಲಾಯಿತು. ಕಾರ್ಯಕ್ರಮಗಳ ರೂಪುರೇಖೆಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಸಂಘಸಂಸ್ಥೆಗಳನ್ನು ಹಾಗೂ ಶಾಲಾಕಾಲೇಜುಗಳ ವಿದ್ಯಾರ್ಥಿಗಳನ್ನುಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಪತ್ರಗಳನ್ನು ಕಳುಹಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ, ಕಾರ್ಯದರ್ಶಿ ಪ್ರೊ.ಪಿ.ಎನ್.ಮೂಡಿತ್ತಾಯ, ಚಿನ್ನಾ ಕಾಸರಗೋಡು, ಕೆ.ಶಶಿಧರ ಐಎಎಸ್, ಡಾ.ಕೆ.ಕಮಲಾಕ್ಷ, ಕೆ.ನಾರಾಯಣ, ಪಿ.ಎಸ್.ಕೇಶವ ಭಟ್ ಕಾರ್ಕಳ, ಎಸ್.ವಿ.ಭಟ್, ಪಿ.ವಿ.ಕೇಶವ, ವಾಣಿ ಪಿ.ಎಸ್, ವಿನಯಾ.ಜಿ.ಭಟ್, ಡಾ.ಸವಿತಾ.ಬಿ, ಡಾ.ವೇದಾವತಿ.ಎಸ್, ಡಾ. ಯು. ಮಹೇಶ್ವರಿ, ಡಾ.ರಾಧಾಕೃಷ್ಣ ಬೆಳ್ಳೂರು, ಕೃಷ್ಣಪ್ರಸಾದ್ ಪಿ.ಎಸ್, ಶ್ರೀಕೃಷ್ಣ.ಬಿ, ಡಾ.ಹರಿಕೃಷ್ಣ ಭರಣ್ಯ, ಡಾ.ಬಾಲಕೃಷ್ಣ ಬಿ.ಎಂ, ಡಾ.ರತ್ನಾಕರ ಮಲ್ಲಮೂಲೆ, ಮಹಮ್ಮದಾಲಿ, ಸುಜಾತಾ ಎಸ್ ಉಪಸ್ಥಿತರಿದ್ದರು.
ಪ್ರೊ.ಪಿ.ಸುಬ್ರಾಯ ಭಟ್ ಜನ್ಮಶತಮಾನೋತ್ಸವ-ಸಮಾಲೋಚನಾ ಸಭೆ
0
ಫೆಬ್ರವರಿ 03, 2023
Tags




