ಕಾಸರಗೋಡು: ಕೇರಳ ವಿಧಾನಸಭೆಯಲ್ಲಿ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲನ್ 2023-24ನೇ ಸಾಲಿನ ಬಜೆಟ್ ಶುಕ್ರವಾರ ಮಂಡಿಸಿದರು. ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ಕೇರಳ ಸರ್ಕಾರ, ಆರ್ಥಿಕ ಕ್ರೋಢೀಕರಣಕ್ಕಾಗಿ ಭಾರಿ ತೆರಿಗೆಯನ್ನು ಜನಸಾಮಾನ್ಯರ ಮೇಲೆ ಹೊರಿಸಿದೆ. ಪೆಟ್ರೋಲ್-ಡೀಸೆಲ್ ಮೇಲೆ ಪ್ರತಿ ಲೀ.ಗೆ 2ರೂ. ಇಂಧನ ಸೆಸ್ ವಿಧೀಸಲಾಗಿದೆ. ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಸರ್ಕಾರ 3ಸಾವಿರ ಕೋಟಿ. ರೂ. ಆದಾಯ ನಿರೀಕ್ಷಿಸಿದೆ.
ಎರಡು ದಿವಸಗಳ ಹಿಂದೆ ಕೇಂದ್ರ ಬಜೆಟ್ ಬಡಜನರ ವಿರೋಧಿ ಎಂದು ಟೀಕಿಸಿದ್ದ ಕೇರಳದ ಎಡರಂಗ ಸರ್ಕಾರ, ರಾಜ್ಯದ ಬಡಜನತೆಯ ಮೇಲೆ ಭಾರಿ ಹೊರೆಯಾಗುವ ರೀತಿಯಲ್ಲಿ ತೆರಿಗೆ ವಿಧಿಸಲು ಮುಂದಾಗಿದೆ. ಸಾಮಾಜಿಕ ಸುರಕ್ಷಾ ಪಿಂಚಣಿ ಮೊತ್ತ ಹೆಚ್ಚಿಸುವ ಭರವಸೆಯೂ ಸುಳ್ಳಾಗಿದೆ. ಈಗಾಗಲೇ ಕಿಫ್‍ಬಿಗಾಗಿ ಸರ್ಕಾರ ಇಂಧನದ ಮೇಲೆ ಪ್ರತಿ ಲೀಟರ್‍ನಲ್ಲಿ ಒಂದು ರೂ. ಸೆಸ್ ವಿಧಿಸುತ್ತಿದ್ದು, ಇದರ ಹೊರತಾಗಿ ಬಜೆಟ್‍ನಲ್ಲಿ ಎರಡು ರೂ. ಸೆಸ್ ಹೇರಲಾಗುತ್ತಿದೆ. ಇಂಧನ ಬೆಲೆ ಏರಿಕೆಯಿಂದ ಈಗಾಗಲೇ ಜನತೆ ಕಂಗಾಲಾಗಿದ್ದು, ಕೇರಳ ಸರ್ಕಾರ ವಿಧಿಸಲು ಮುಂದಾಗಿರುವ ಸೆಸ್‍ನಿಂದಾಗಿ ಬಾಣಲೆಯಿಂದ ಬೆಂಕಿಗೆ ಬಿದ್ದ ಪರಿಸ್ಥಿತಿ ಎದುರಾಗಿದೆ. ಕಟ್ಟಡ ತೆರಿಗೆ, ವಾಹನ, ಭೂಮಿ, ವಿದ್ಯುತ್, ನೀರಿನ ದರ ಸೇರಿದಂತೆ ಎಲ್ಲ ವಲಯವನ್ನೂ ಬೆಲೆಯೇರಿಕೆ ಬಿಸಿ ವ್ಯಾಪಿಸಿದೆ.
ಕಾಸರಗೋಡು ಅಭಿವೃದ್ಧೀಗೆ 10ಕೋಟಿ:
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ಗೆ ಕೇರಳ ಸರ್ಕಾರದ ಈ ವರ್ಷದ ಬಜೆಟ್‍ನಲ್ಲಿ 10ಕೋಟಿ ರೂ. ಮೀಸಲಿರಿಸಲಾಗಿದೆ. ಕಾಸರಗೋಡು ಪೆರಿಯ ಏರ್ ಸ್ಟ್ರಿಪ್‍ಗೆ 20ಕೋಟಿ ರೂ. ಕಾಸರಗೋಡು ಟಾಟಾ ಕೋವಿಡ್ ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಯ ಭರವಸೆಯನ್ನು ಬಜೆಟ್‍ನಲ್ಲಿ ನೀಡಲಾಗಿದೆ. ಆವಶ್ಯಕ ಸಾಮಗ್ರಿ ಬೆಲೆಯೇರಿಕೆ ತಡೆಗಟ್ಟಲು 2ಸಾವಿರ ಕೋಟಿ. ರೂ. ಮೀಸಲಿರಿಸಲಾಗಿದೆ. ತೆಂಗಿನ ಬೆಂಬಲಬೆಲೆಯನ್ನು 32ರಿಂದ 34ರೂ.ಗೆಏರಿಸಲಾಗಿದೆ. ಬಡಜನತೆಗೆ ಕನ್ನಡಡಕ ವಿತರಣೆಗೆ 50ಕೋಟಿ. ಕಲ್ಯಾಣ ಅಭಿವೃದ್ಧಿ ಯೋಜನೆಗೆ ನೂರು ಕೋಟಿ, ಬೆಳೆ ವಿಮೆಗೆ 30ಕೋಟಿ, ಭತ್ತ ಕೃಷಿ ಅಭಿವೃದ್ಧಿಗೆ 91.05ಕೋಟಿ, ನಗರಿಕರಣಕ್ಕೆ 300ಕೋಟಿ, ಮೀನುಗಾರಿಕೆ ವಲಯ ಅಭಿವೃದ್ಧೀಗೆ 321.35ಕೋಟಿ, ಪ್ರವಾಸಿ ಯೋಜನೆಗೆ 50ಕೋಟಿ, ಕೆಎಸ್ಸಾರ್ಟಿಸಿಗೆ 131ಕೋಟಿ, ವೈದ್ಯಕೀಯ ಕಾಲೇಜು ಅಭಿವೃದ್ಧಿಗೆ 237.27ಕೋಟಿ, ವಇದ್ಯಾಭ್ಯಾಸ ವಲಯಕ್ಕೆ 1773ಕೋಟಿ, ಕುಟುಂಬಶ್ರೀಗೆ 260ಕೋಟಿ, ಶಬರಿಮಲೆ ಮಾಸ್ಟರ್ ಪ್ಲಾನ್‍ಗೆ 30ಕೋಟಿ, ವನ್ಯಜೀವು ಉಪಟಳ ತಡೆಗೆ 50.85ಕೋಟಿ, ರಬ್ಬರ್ ಕೃಷಿಕರಿಗೆ ಸಹಾಯಕ್ಕಗಿ 600ಕೋಟಿ ರೂ. ಸಬ್ಸಿಡಿ ಯೋಜನೆ, ಬಡಜನತೆಗೆ ಮನೆ ನಿರ್ಮಿಸಿಕೊಡುವ ಲೈಫ್ ಯೋಜನೆಗೆ 1436ಕೋಟಿ ರೂ. ಮೀಸಲಿರಿಸಲಾಗಿದೆ. ಹಣಕಾಸು ಸಚಿವ ಕೆ.ಎನ್ ರಾಜಗೋಪಾಲನ್ ಮಂಡಿಸುವತ್ತಿರುವ ಮೂರನೇ ಬಜೆಟ್ ಇದಾಗಿದ್ದುಮ ಈ ಬಾರಿ ಸಂಪೂರ್ಣ ಪೇಪರ್‍ಲೆಸ್ ಬಜೆಟ್ ಮಂಡಿಸಲಾಗಿದೆ.
ಜನಸಾಮಾನ್ಯರಿಗೆ ಹೊರೆಯಾದ ಕೇರಳ ಬಜೆಟ್: ಕಾಸರತಗೋಡು ಅಭಿವೃದ್ಧಿ ಪ್ಯಾಕೇಜ್‍ಗೆ 10ಕೋಟಿ, ಇಂಧನದ ಮೇಲೆ ಸೆಸ್
0
ಫೆಬ್ರವರಿ 03, 2023
Tags




