ಮಧೂರು: ಮಧೂರು ವಿವೇಕಾನಂದ ನಗರ ಕರಯೋಗ ಮಂದಿರದಲ್ಲಿ ಮಧೂರು ಎನ್.ಎಸ್.ಎಸ್.(ನಾಯರ್ ಸರ್ವೀಸ್ ಸೊಸೈಟಿ) ಕರಯೋಗ ಕುಟುಂಬ ಮೇಳ ನಡೆಯಿತು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ನ್ಯಾಯವಾದಿ. ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಕರಯೋಗಂ ವ್ಯಾಪ್ತಿಯ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು. ತಾಲೂಕು ಒಕ್ಕೂಟದ ವನಿತಾ ವಿಭಾಗದ ಅಧ್ಯಕ್ಷೆ ಸ್ಮಿತಾ ಬಾಲಕೃಷ್ಣನ್, ಎನ್‍ಎಸ್‍ಎಸ್ ಇನ್‍ಸ್ಪೆಕ್ಟರ್ ಉಣ್ಣಿಕೃಷ್ಣನ್, ಕರಯೋಗಂ ಉಪಾಧ್ಯಕ್ಷ ಕೆ.ಪಿ.ರವೀಂದ್ರನ್, ಖಜಾಂಚಿ ವಿ.ಕೆ.ಮೋಹನನ್ ಶುಭಹಾರೈಸಿದರು. ನಿರ್ಮಲ್ ಕುಮಾರ್ ಅವಿಭಕ್ತ ಕುಟುಂಬ ಕುರಿತು ತರಗತಿ ನಡೆಸಿದರು. ಕರಯೋಗಂ ನಿರ್ದೇಶಕರು, ತಾಲೂಕು ಒಕ್ಕೂಟದ ಅಧ್ಯಕ್ಷರು ಹಾಗೂ ಎನ್‍ಎಸ್‍ಎಸ್ ನಿರ್ದೇಶಕ ಮಂಡಳಿ ಸದಸ್ಯರುಗಳು ಭಾಗವಹಿಸಿದ್ದರು. ಎ.ಪ್ರಭಾಕರನ್ ನಾಯರ್ ಸ್ವಾಗತಿಸಿ, ಮುರಳೀಧರನ್ ನಾಯರ್ ವಂದಿಸಿದರು.
ಮಧೂರು ಎನ್‍ಎಸ್‍ಎಸ್ ಕರಯೋಗಂನಿಂದ ಕುಟುಂಬ ಮೇಳ
0
ಫೆಬ್ರವರಿ 08, 2023

.jpg)
