ಉಪ್ಪಳ: ಉಪ್ಪಳ ಮಣಿಮುಂಡ ಶಾಲೆಯಲ್ಲಿ ಎರಡು ದಿನಗಳ ಮದ್ರಸ ಫೆಸ್ಟ್, ವಿಜ್ಞಾನ ಮೇಳ ಹಾಗೂ ಶಾಲಾ ವಾರ್ಷಿಕ ದಿನಾಚರಣೆ ಅದ್ದೂರಿಯಾಗಿ ನಡೆದು ಸಮಾಪ್ತಿಗೊಂಡಿತು.
ಮದ್ರಸ ಫೆಸ್ಟ್ ಅರಬಿಕ್ ಖಿರಾಹತನ್ನು ಉರ್ದು, ಮಲಯಾಳ ಹಾಗೂ ಕನ್ನಡ ಭಾμÉಗಳಲ್ಲಿ ಭಾಷಾಂತರಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಾಲಾ ಆಡಳಿತ ನಿರ್ದೇಶಕ ಅಜೀಮ್ ಮಣಿಮುಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪದ ಸಮಾರಂಭವನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಆಧ್ಯಕ್ಷೆ ಶಮೀನಾ ಇಕ್ಬಾಲ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಂಗಳೂರು ಬದ್ರಿಯಾ ಕಾಲೇಜಿನ ನಿವೃತ ಪ್ರಾಂಶುಪಾಲ ಹಂಝ, ಡೆಲ್ಟಾ ಶಾಲೆ ಕಡಂಬಾರು ಇದರ ಪ್ರಾಂಶುಪಾಲ ಮೊಹಮ್ಮದ್ ರಿಯಾಜ್ ಹಾಗೂ ಕಾಮಿಲ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ಮೊಯಿದಿನ್ ಕುಂಞÂ ಶುಭಹಾರೈಸಿ ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಮೊಹಮ್ಮದ್ ಮುಶಾಬ್ ಶೇಖ್ ರಚಿಸಿದ ಟೇಲ್ಸ್ ಆಫ್ ಮೈ ಲೈಫ್ ಪುಸ್ತಕವನ್ನು ಬದ್ರಿಯಾ ಕಾಲೇಜು ನಿವೃತ ಪ್ರಾಂಶುಪಾಲ ಹಂಝ ಬಿಡುಗಡೆಗೊಳಿಸಿದರು. ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕವನ್ನು ಪಡೆದು ನಾಡಿಗೆ ಕೀರ್ತಿ ತಂದ ಅಫೀಫಾ ಶೇಖ್, ಅಫೀಫಾ ಇಕ್ಬಾಲ್ ಶೇಖ್ , ಫಾತಿಮತ್ ಅಝ, ಝುಲ್ಫಾ ಜಾಮಿಯಾ, ಮೊಹಮ್ಮದ್ ಜುನೈದ್ ರನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕರ್ನಾಟಕ ದಸರಾ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೂ ಪ್ರಮಾಣ ಪಾತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಪೆÇೀಷಕರುಗಳು, ಊರವರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.
ವಿಜ್ಞಾನ ಮೇಳ ಹಾಗೂ ಶಾಲಾ ವಾರ್ಷಿಕ ಸಮಾಪ್ತಿ
0
ಫೆಬ್ರವರಿ 01, 2023
Tags




.jpg)
