HEALTH TIPS

ಹೊಸ ತೆರಿಗೆ ವ್ಯವಸ್ಥೆಯಿಂದ ಉಳಿತಾಯದ ಮೇಲೆ ವ್ಯತಿರಿಕ್ತ ಪರಿಣಾಮ: ಎಸ್‌ಜೆಎಂ

 

                  ನವದೆಹಲಿ: ಹೊಸ ಆದಾಯ ತೆರಿಗೆ ವ್ಯವಸ್ಥೆಯು ಉಳಿತಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಸ್ವದೇಶಿ ಜಾಗರಣ ಮಂಚ್ (ಎಸ್‌ಜೆಎಂ) ಶುಕ್ರವಾರ ಹೇಳಿದೆ.

                     ಮಧ್ಯಮ ವರ್ಗದ ಉಳಿತಾಯ ಉತ್ತೇಜಿಸಲು ಹೊಸ ತೆರಿಗೆ ವ್ಯವಸ್ಥೆ ಬದಲಾಯಿಸುವಂತೆ ಎಸ್‌ಜೆಎಂ ಕೇಂದ್ರವನ್ನು ಒತ್ತಾಯಿಸಿದೆ.

                   'ನಿರೀಕ್ಷೆಯಂತೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಮಧ್ಯಮ ವರ್ಗ ಮತ್ತು ಅತಿ ಶ್ರೀಮಂತರಿಗೆ ಆದಾಯ ತೆರಿಗೆ ಹೊರೆ ಕಡಿಮೆ ಮಾಡಲಾಗಿದೆ. ಇದು ಒಟ್ಟು ₹37,000 ಕೋಟಿ ಗಳ ಆದಾಯದ ಮೇಲೆ ಪರಿಣಾಮ ಬೀರುತ್ತದೆ' ಎಂದು ಎಸ್‌ಜೆಎಂ ಸಹ ಸಂಚಾಲಕ ಅಶ್ವನಿ ಮಹಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

                 'ಹೊಸ ಆದಾಯ ತೆರಿಗೆ ವ್ಯವಸ್ಥೆಯು ತೆರಿಗೆದಾರರಿಗೆ ಕಡಿಮೆ ತೆರಿಗೆ ಹೊರೆಯೊಂದಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ಸುಲಭದ ದೃಷ್ಟಿಯಿಂದ ಪರಿಹಾರ ನೀಡಬಹುದು. ಆದರೆ, ಇದು ಆದಾಯ ತೆರಿಗೆ ಪಾವತಿದಾರರು ಮಾಡುವ ಉಳಿತಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ' ಎಂದು ಅವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries