HEALTH TIPS

ಆತ್ಮಹತ್ಯೆಗೆ ಯತ್ನಿಸಿದವನ ಜೀವ ಫೇಸ್​​ಬುಕ್​ ಲೈವ್​ನಿಂದಾಗಿ ಉಳಿಯಿತು!

 

              ಘಾಜಿಯಾಬಾದ್​: ಇಲ್ಲೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಕೊನೆಗೂ ಬದುಕುಳಿದಿದ್ದಾನೆ. ಈತನ ಆತ್ಮಹತ್ಯೆಯ ಯತ್ನದ ವೇಳೆಯ ಫೇಸ್​ಬುಕ್​ ಲೈವ್​ನಿಂದಾಗಿ ಜೀವ ಉಳಿದಿದೆ. ಪೊಲೀಸ್ ಅಧಿಕಾರಿಯೊಬ್ಬರು ಈತನ ಆತ್ಮಹತ್ಯೆ ಯತ್ನ ಯಶಸ್ವಿ ಆಗದಂತೆ ತಡೆಯುವ ಮೂಲಕ ಪ್ರಾಣ ಉಳಿಸಿದ್ದಾರೆ.

           ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ಈ ಪ್ರಕರಣ ನಡೆದಿದೆ. ಅಭಯ್ ಶುಕ್ಲಾ ಎಂಬ 23 ವರ್ಷದ ವ್ಯಕ್ತಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಮಾತ್ರವಲ್ಲ, ತನ್ನ ಆತ್ಮಹತ್ಯೆ ಪ್ರಯತ್ನವನ್ನು ಫೇಸ್​​ಬುಕ್​ನಲ್ಲಿ ಲೈವ್ ಇರಿಸಿದ್ದ.

                ಆದರೆ ಘಾಜಿಯಾಬಾದ್ ಠಾಣೆಯ ಪೊಲೀಸ್ ಅಧಿಕಾರಿ ಅನಿತಾ ಚೌಹಾಣ್​ ಅವರು ಅಭಯ್ ಶುಕ್ಲಾ ಜೀವವನ್ನು ಉಳಿಸಿದ್ದಾರೆ. 90 ಸಾವಿರ ರೂ. ನಷ್ಟದ ಹಿನ್ನೆಲೆಯಲ್ಲಿ ಈತ ಆತ್ಮಹತ್ಯೆಗೆ ಮುಂದಾಗುತ್ತಿರುವುದಾಗಿ ಗುರುವಾರ ರಾತ್ರಿ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡಿದ್ದ. ಇವೆಲ್ಲವೂ ಫೇಸ್​ಬುಕ್​ನಲ್ಲಿ ಲೈವ್ ಆಗುವಂತೆ ಈತ ಮೊಬೈಲ್​ಫೋನ್​ ಇರಿಸಿದ್ದ.

                ಈ ಲೈವ್​ಗೆ ಸಂಬಂಧಿಸಿದಂತೆ ಫೇಸ್​ಬುಕ್ ಮಾತೃಸಂಸ್ಥೆ ಮೆಟಾದ ಯುಎಸ್ ಕಚೇರಿಯಿಂದ ಸ್ಥಳೀಯ ಡಿಸಿಪಿ ನಿಪುಣ್ ಅಗರ್​ವಾಲ್ ಅವರಿಗೆ ಅಲರ್ಟ್ ಬಂದಿತ್ತು. ಅವರು ಈ ಕುರಿತು ಅನಿತಾಗೆ ಮಾಹಿತಿ ನೀಡಿದ್ದು, ಈಕೆ ತನ್ನ ತಕ್ಷಣದ ಸ್ಪಂದನೆ ಹಾಗೂ ಸಂವಹನ ಶಕ್ತಿ ಮೂಲಕ ಅಭಯ್ ಪ್ರಾಣ ಉಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries