ಬದಿಯಡ್ಕ: ಸಮಾಜಮುಖೀ ಚಿಂತನೆಗಳೊಂದಿಗೆ ತನ್ನ ಜೀವನವನ್ನು ಸವೆಸಿದ ವೆಂಕಪ್ಪನಾಯ್ಕರು ಪ್ರಾತಃಸ್ಮರಣೀಯರು. ವೃತ್ತಿಯೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಇಂತಹ ವ್ಯಕ್ತಿಗಳನ್ನು ಕಾಣಸಿಗುವುದು ತೀರಾ ವಿರಳ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಹೇಳಿದರು.
ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸ್ಥಾಪಕ ಸದಸ್ಯರು, ಮಾಜಿ ಅಧ್ಯಕ್ಷರು ಆಗಿದ್ದು, ಇತ್ತೀಚೆಗೆ ನಿಧನರಾದ ವೆಂಕಪ್ಪ ನಾಯ್ಕ ಮಾನ್ಯ ಅವರಿಗೆ ಚುಕ್ಕಿನಡ್ಕ ಶಬರಿ ಸಭಾ ಭವನದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಸಭೆÉಯನ್ನುದ್ದೇಶಿಸಿ ಅವರು ಮಾತನಾಡಿದರು.
ಸದಾ ಶ್ವೇತವಸ್ತ್ರದಾರಿಯಾಗಿ ಕಾಣಿಸಿಕೊಳ್ಳುತ್ತಿದ್ದ ಅವರು ಆಂತರಿಕವಾಗಿ ಪರಿಶುದ್ಧರಾಗಿದ್ದರು. ಯಾವುದೇ ಸನ್ನಿವೇಶದಲ್ಲಿಯೂ ತನ್ನ ಆದರ್ಶವನ್ನು ಎತ್ತಿಹಿಡಿದ ವ್ಯಕ್ತಿ ಅವರಾಗಿದ್ದಾರೆ ಎಂದರು.
ಶ್ರೀಮಂದಿರದ ಸ್ಥಾಪಕ ಪ್ರಧಾನ ಕಾರ್ಯದರ್ಶಿ, ನಿವೃತ್ತ ಮುಖ್ಯೋಪಾಧ್ಯಾಯ ಗೋಪಾಲ ಭಟ್ ಚುಕ್ಕಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಾದ ಪೆÇ್ರ. ಶ್ರೀನಾಥ್ ಕಾಸರಗೋಡು, ನಾರಾಯಣ ಮಣಿಯಾಣಿ ನೀರ್ಚಾಲು, ಉಳಿಯ ನಾರಾಯಣ ಅಸ್ರ, ಮಂದಿರದ ಪ್ರಧಾನ ಗುರುಸ್ವಾಮಿ ಕುಂಞಕಣ್ಣ ಮಣಿಯಾಣಿ, ಹರೀಶ್ ನಾರಂಪಾಡಿ, ಖಾದರ್ ಮಾನ್ಯ, ಶ್ಯಾಮ್ ಪ್ರಸಾದ್ ಮಾನ್ಯ, ಸುಂದರ ಶೆಟ್ಟಿ ಕೊಲ್ಲಂಗಾನ, ರಾಧಾಕೃಷ್ಣ ರೈ ಕಾರ್ಮಾರು, ಮಂಜುನಾಥ ಮಾನ್ಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ನುಡಿ ನಮನ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಮಂದಿರದ ಅಧ್ಯಕ್ಷ ಮಹೇಶ್ ವಳಕುಂಜ ಪ್ರಸ್ತಾವಿಕವಾಗಿ ಮಾತನಾಡಿದರು.
ಚುಕ್ಕಿನಡ್ಕದಲ್ಲಿ ನಿವೃತ್ತ ನೋಂದಾವಣಾಕಾರಿ ವೆಂಕಪ್ಪ ನಾಯ್ಕರಿಗೆ ನುಡಿ ನಮನ
0
ಫೆಬ್ರವರಿ 06, 2023
Tags




.jpg)
