ಕಾಸರಗೋಡು: ದೇಶದಲ್ಲಿ ಕೊರೊನಾ ಮಹಾಮಾರಿ ನಂತರ ಹೆಸರು ಬದಲಾಯಿಸುವ ಮಹಾಮಾರಿ ಜಾರಿಯಲ್ಲಿದೆ. ದೆಹಲಿಯ ಮೊಘಲ್ ಉದ್ಯಾನವನವನ್ನು ಅಮೃತೋದ್ಯಾನ ಎಂದು ಮರುನಾಮಕರಣ ಮಾಡಿರುವುದು ಇದಕ್ಕೆ ಅಂತಿಮ ಉದಾಹರಣೆಯಾಗಿದೆ. ಇದು ಕೆಲವರ ಯೋಜಿತ ಅಜೆಂಡಾ. ಅವರು ಇತಿಹಾಸವನ್ನು ಕೂಡ ತಿರುಚುತ್ತಾರೆ. ರಾಷ್ಟ್ರವನ್ನು ಯಾವುದೇ ಧರ್ಮಕ್ಕೆ ನೀಡಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಕೇರಳ ವಿಧಾನಸಭಾ ಸ್ಪೀಕರ್ ಎ.ಎಂ. ಶಂಶೀರ್ ಅವರು ತಿಳಿಸಿದರು.
ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ 75ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸಾಂವಿಧಾನಿಕ ಸಾಕ್ಷರತೆ ಕಲಿಸುವುದು ಅಗತ್ಯ ಎಂದರು. ಶಾಸಕ ಇ.ಚಂದ್ರಶೇಖರನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಣಿಕಂಠದಾಸ್ ರಚಿಸಿದ ಸ್ವಾಗತ ಗೀತೆಗೆ ದುರ್ಗಾ ಶಾಲೆಯ ಸಂಗೀತ ಶಿಕ್ಷಕ ಹರಿಮುರಳಿ ಉಣ್ಣಿಕೃಷ್ಣನ್ ಅವರು ಸಂಗೀತ ಸಂಯೋಜಿಸಿದರು.
ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹಾಡಿದ 10 ನಿಮಿಷಗಳ ಸುದೀರ್ಘ ಸ್ವಾಗತ ಗೀತೆಗೂ ವೇದಿಕೆ ಸಾಕ್ಷಿಯಾಯಿತು.
ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಾಕುಮಾರಿ, ಕೌನ್ಸಿಲರ್‍ಗಳಾದ ವಿ.ವಿ.ರಮೇಶ, ಎನ್.ಅಶೋಕ್ ಕುಮಾರ್, ಕುಸುಮಾ ಹೆಗ್ಡೆ ಮಾತನಾಡಿದರು. ಕಾಞಂಗಾಡ್ ಡಿಇಒಎಂ ಸುರೇಶ್ ಕುಮಾರ್, ಎಇಒ ಅಹ್ಮದ್ ಷರೀಫ್ ಕುರಿಕಲ್, ಮುಖ್ಯ ಶಿಕ್ಷಕ ವಿನೋದ್ ಕುಮಾರ್ ಮೇಲತ್, ಮಾತೃಸಂಘದ ಅಧ್ಯಕ್ಷೆ ನ್ಯಾಯವಾದಿ ಎಂ. ಅಶಾಲತಾ ಮಾತನಾಡಿದರು. ಸಂಘಟನಾ ಸಮಿತಿಯ ಅಧ್ಯಕ್ಷ ಕೆ ವೇಣುಗೋಪಾಲನ್ ನಂಬಿಯಾರ್ ಸ್ವಾಗತಿಸಿ, ಶಾಲಾ ಪ್ರಾಂಶುಪಾಲೆ ವಿ.ವಿ.ಅನಿತಾ ವಂದಿಸಿದರು.
ನಂತರ ರಾಜ್ಯ ಶಾಲಾ ಕಲಾ ಉತ್ಸವದಲ್ಲಿ ವಿಜೇತ ಕಲಾವಿದರಿಂದ ಕಲಾ ಪ್ರದರ್ಶನ ನಡೆಯಿತು.
ಮಕ್ಕಳಿಗೆ ಸಾಂವಿಧಾನಿಕ ಸಾಕ್ಷರತೆ ಕಲಿಸುವುದು ಅಗತ್ಯ: ಸ್ಪೀಕರ್ ಎ.ಎಂ. ಶಂಸೀರ್
0
ಫೆಬ್ರವರಿ 06, 2023
Tags




.jpg)
