ಕಾಸರಗೋಡು: ಕೂಡ್ಲು ಹೊಸಮನೆ ಸ್ವಾಮಿ ಕೊರಗಜ್ಜ ದೈವ ಸನ್ನಿಧಿಯ ಪುನಃ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀ ಸನ್ನಿಧಿಯ ದಿ ಕುಟ್ಯಪ್ಪ ರೈ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಿತು. ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಜಿ ಶಾನ್‍ಭಾಗ್ ಸಮಾರಂಭ ಉದ್ಘಾಟಿಸಿದರು. ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು.
ತುಳು ಜಾನಪದ ವಿದ್ವಾಂಸರಾದ ಕೆ ಕೆ ಪೇಜಾವರ್ ಮುಖ್ಯ ಭಾಷಣ ಮಾಡಿದರು. ಸೇವಾ ಸಮಿತಿ ಗೌರವಾಧ್ಯಕ್ಷೆ ಲೀಲಾವತಿ ಕುಟ್ಯಪ್ಪ ರೈ, ಮಧೂರು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು, ಸೇವಾಸಮಿತಿ ಗೌರವಾಧ್ಯಕ್ಷ ಬಾಬು ರೈ, ಗೌರವ ಸಲಹೆಗಾರ ಧೂಮಣ್ಣ ರೈ, ಕಾರ್ಯಾಧ್ಯಕ್ಷ ಮಹಾಬಲ ರೈ, ಪ್ರಧಾನ ಕಾರ್ಯದರ್ಶಿ ಭಾನು ಪ್ರಕಾಶ್, ಕಾರ್ಯಾಧ್ಯಕ್ಷ ಶ್ರೀಧರ ಕೂಡ್ಲು , ಮೂಕಾಂಬಿಕಾ ದೇವಸ್ಥಾನದ ಪಾತ್ರಿ ನಾರಾಯಣ ಪೂಜಾರಿ, ಸ್ಥಳೀಯ ಧಾರ್ಮಿಕ ಮುಂದಾಳು ಸುರೇಶ್ ನಾಯ್ಕ್, ವಾರ್ಡು ಸದಸ್ಯೆ ಯಶೋಧ ಸುಂದರ ನಾಯ್ಕ್ ಉಪಸ್ಥಿತರಿದ್ದರು. ಪ್ರತಿಷ್ಠ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಅವಿನಾಶ್ ಗಂಗೆ ಸ್ವಾಗತಿಸಿದರು. ಸಹ ಸಂಚಾಲಕ ಕಿಶನ್ ಮಾಸ್ಟರ್ ವಂದಿಸಿದರು.
ಕೂಡ್ಲು ಹೊಸಮನೆ ಕೊರಗಜ್ಜ ದೈವ ಸನ್ನಿಧಿಯಲ್ಲಿ ಧಾರ್ಮಿಕ ಸಭೆ
0
ಫೆಬ್ರವರಿ 06, 2023
Tags





