ಮುಳ್ಳೇರಿಯ: ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಶನಿವಾರ ಸುರೇಖಾ ಕಲ್ಲಡ್ಕ ಮತ್ತು ಮನೆಯವರಿಂದ ಸೇವಾರೂಪವಾಗಿ “ಭಕ್ತ ಸುಧನ್ವ” ಯಕ್ಷಗಾನ ತಾಳಮದ್ದಳೆ ಜರಗಿತು. ಕಾರ್ಯಕ್ರಮದ ಮೊದಲಿಗೆ ಸ್ಥಳಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ಸ್ವಾಮಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು.
ಬಳಿಕ ಹಿರಿಯ ಭಾಗವತ ಗುರು ವಿಶ್ವವಿನೋದ ಬನಾರಿ ಅವರ ನಿರ್ದೇಶನದೊಂದಿಗೆ ಮುನ್ನಡೆದ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ನಿತೀಶ್ ಕುಮಾರ್ ಎಂಕಣ್ಣಮೂಲೆ, ಚೆಂಡೆ-ಮದ್ದಳೆ ವಾದನದಲ್ಲಿ ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ಸದಾನಂದ ಪೂಜಾರಿ ಮಯ್ಯಾಳ ಮತ್ತು ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಐತ್ತಪ್ಪ ಗೌಡ ಮುದಿಯಾರು (ಹಂಸಧ್ವಜ), ವೆಂಕಟ್ರಮಣ ಮಾಸ್ತರ್ ದೇಲಂಪಾಡಿ (ಅರ್ಜುನ), ಎಂ.ರಮಾನಂದ ರೈ (ಸುಧನ್ವ), ರಾಮನಾಯ್ಕ ದೇಲಂಪಾಡಿ (ಅನುಸಾಲ್ವ) ಹಾಗೂ ವೀರಪ್ಪ ನಡುಬೈಲು (ಶ್ರೀಕೃಷ್ಣ) ಅವರು ಪಾತ್ರಗಳನ್ನು ನಿರ್ವಹಿಸಿದರು. ಲತಾ ಆಚಾರ್ಯ ಬನಾರಿ ಸ್ವಾಗತಿಸಿ, ಪಾತ್ರಪರಿಚಯ ಮಾಡಿಕೊಟ್ಟರು. ಸುರೇಖಾ ಕಲ್ಲಡ್ಕ ವಂದಿಸಿದರು.




.jpg)
.jpg)
