HEALTH TIPS

ಇಂಡೋ-ಪಾಕ್ ಕದನದ ವೇಳೆ ಮುಳುಗಡೆಯಾಗಿದ್ದ ಯುದ್ಧನೌಕೆಗೆ ಕಡಲಾಳದಲ್ಲಿ ಗೌರವಾರ್ಪಣೆ!

 

              ನವದೆಹಲಿ: 1971ರ ಇಂಡೋ-ಪಾಕ್ ಕದನದ ವೇಳೆ ಸಮುದ್ರದಲ್ಲಿ ಮುಳುಗಡೆಯಾಗಿದ್ದ ಭಾರತದ ಯುದ್ಧನೌಕೆ 'ಐಎನ್‌ಎಸ್‌ ಖುಕ್ರಿ'ಗೆ ಕಡಲಾಳದಲ್ಲಿ ಗೌರವಾರ್ಪಣೆ ಮಾಡಲಾಗಿದೆ.

                   ಸಮುದ್ರ ಗರ್ಭ ಸೇರಿರುವ ನೌಕೆಯ ಬಳಿಗೆ ಫೆ. 11ರ ಭಾನುವಾರ ತಲುಪಿದ್ದ ಭಾರತದ ನೌಕಾದಳದ ಮುಳುಗು ತಜ್ಞರು ನೌಕೆಯ ಅವಶೇಷಗಳಿಗೆ ಪುಷ್ಪ ನಮನ ಸಲ್ಲಿಸಿದ್ದರು.

ಈ ಚಿತ್ರಗಳನ್ನು ನೌಕಾಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.


                     'ನೌಕಾಪಡೆಯು ಐಎನ್‌ಎಸ್‌ ಖುಕ್ರಿಯ ಪತನವನ್ನು ಎಂದಿಗೂ ಮರೆಯುವುದಿಲ್ಲ. 1971ರ ಯುದ್ಧದಲ್ಲಿ ನಷ್ಟವಾಗಿದ್ದ ನೌಕೆಯ ವಿಶ್ರಾಂತಿ ಸ್ಥಳಕ್ಕೆ ತೆರಳಿ, ಹೂವಿನ ಮಾಲೆಗಳನ್ನು ಸಮರ್ಪಿಸುವ ಮೂಲಕ 'ಖುಕ್ರಿ' ಮತ್ತು ಅದರ ಸಿಬ್ಬಂದಿಯ ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಲಾಯಿತು' ಎಂದು ಭಾರತೀಯ ನೌಕಾಪಡೆ ಟ್ವೀಟ್‌ ಮಾಡಿ ಹೇಳಿದೆ.

                      ಇಂಡೋ-ಪಾಕ್‌ ಯುದ್ಧದ ವೇಳೆ ಗುಜರಾತ್‌ನ ಡಿಯು ಬಳಿ ಪಾಕಿಸ್ತಾನದ ಜಲಾಂತರ್ಗಾಮಿ ಹಾಂಗೋರ್‌ನ ದಾಳಿಗೆ ಒಳಗಾಗಿದ್ದ ಐಎನ್‌ಎಸ್‌ ಖುಕ್ರಿ, ಸಮುದ್ರದಲ್ಲಿ ಮುಳುಗಡೆಯಾಗಿತ್ತು. 1971ರ ಡಿ. 9ರಂದು ನಡೆದಿದ್ದ ಈ ಘಟನೆಯಲ್ಲಿ ನೌಕೆಯ ಕ್ಯಾಪ್ಟನ್ ಮಹೇಂದ್ರ ನಾಥ್ ಮುಲ್ಲಾ ಸೇರಿದಂತೆ 18 ಅಧಿಕಾರಿಗಳು ಮತ್ತು 176 ಸೈನಿಕರು ಹುತಾತ್ಮಕರಾಗಿದ್ದರು. 6 ಅಧಿಕಾರಿಗಳು ಮತ್ತು 61 ಸೈನಿಕರು ದುರಂತದಲ್ಲಿ ಬದುಕುಳಿದಿದ್ದರು.

The Navy Never Forgets Its Fallen. #IndianNavy on 11 Feb 23 paid unique tribute in eternal gratitude to the ultimate sacrifice of the brave INS Khukri and her crew by laying wreaths underwater at the final resting place of the ship that was lost in the 1971 War. #LestWeForget
Image
Image

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries