ಕಾಸರಗೋಡು: ಬ್ರದರ್ಸ್ ಬೇಕಲ್ ಆಟ್ರ್ಸ್ ಸ್ಪೋಟ್ರ್ಸ್ ಕ್ಲಬ್ ಮತ್ತು ಗೋಲ್ಡ್ ಹಿಲ್ ಹದ್ದಾದ್ ಜಂಟಿಯಾಗಿ ಆಯೋಜಿಸಿರುವ ಎಸ್.ಎಫ್.ಎ ಅನುಮೋದಿತ ಅಖಿಲ ಭಾರತ ಬೇಕಲ್ ಸೆವೆನ್ಸ್ ಫುಟ್‍ಬಾಲ್ ಪಂದ್ಯಾವಳಿ ಶುಕ್ರವಾರ ರಾತ್ರಿ ಬೇಕಲದಲ್ಲಿ ಆರಂಭಗೊಂಡಿತು.
ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹ್ಮದ್ ಐಎಎಸ್ ಪಂದ್ಯಾಟ ಉದ್ಘಾಟಿಸಿದರು. 15ದಿವಸಗಳ ಕಾಲ ನಡೆಯಲಿರುವ ಹೊವನಲುಬೆಳಕಿನ ಪಂದ್ಯಾವಳಿಯಲ್ಲಿ ಭಾರತದ 16 ಪ್ರಮುಖ ತಂಡಗಳು ಭಾಗವಹಿಸುತ್ತಿದೆ. ಕೇರಳದ ಪ್ರತಿಭಾವಂತ ಆಟಗಾರರು ಘಾನಾ, ಸೆನೆಗಲ್, ಕೋಟ್-ಐವೊರ್ ಮತ್ತು ಸುಡಾನ್‍ನ ವಿದೇಶಿ ಆಟಗಾರರೊಂದಿಗೆ ಆಡಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿವಿದೇಶಿ ಆಟಗಾರರೊಂದಿಗೆ ಕೇರಳದ ಪ್ರತಿಭಾವಂತ ಆಟಗಾರರೂ ಸೆಣಸಾಟ ನಡೆಸಿದರು.
ವಿವಿಧ ದಿನಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದ ಗಣ್ಯರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪಂದ್ಯಾವಳಿಯಿಂದ ಬರುವ ಆದಾಯವನ್ನು ಹಿಂದುಳಿದ ಮತ್ತು ಬೆಳೆಯುತ್ತಿರುವ ಸ್ಥಳೀಯ ಮಕ್ಕಳಿಗೆ ಆರ್ಥಿಕ ನೆರವು ನೀಡಲು ಬಳಸಲಾಗುತ್ತದೆ.
ಬ್ರದರ್ಸ್ ಬೇಕಲ್ ವತಿಯಿಂದ ಅಖಿಲ ಭಾರತ ಬೇಕಲ್ ಸೆವೆನ್ಸ್ ಫುಟ್‍ಬಾಲ್ ಪಂದ್ಯಾವಳಿಗೆ ಚಾಲನೆ
0
ಫೆಬ್ರವರಿ 04, 2023




