HEALTH TIPS

ಎಣ್ಮಕಜೆ ಗ್ರಾಮ ಪಂಚಾಯತು ಅಭಿವೃದ್ಧಿ ಸೆಮಿನಾರ್


           ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ವಾರ್ಷಿಕ ಯೋಜನೆ ರಚನೆಯ ಅಂಗವಾಗಿ 2023-2024 ಅಭಿವೃದ್ಧಿ ಸೆಮಿನಾರ್ ಪಂಚಾಯತಿ ಸಭಾಂಗಣದಲ್ಲಿ  ನಡೆಯಿತು.
              ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿ ಪಂಚಾಯತಿನ ಮುಖ್ಯ ಪೇಟೆ ಪೆರ್ಲ ಸಹಿತ ವಿವಿಧ  ಪ್ರದೇಶದ ಅಭಿವೃದ್ಧಿ, ಕೃಷಿ, ಶೈಕ್ಷಣಿಕ ಹಾಗೂ ಆರೋಗ್ಯ ರಂಗದ ಪುರೋಗತಿಗೆ ಅನುಕೂಲಕರವಾದ ರೂಪುರೇμÉ ರಚಿಸುವ ಅಭಿವೃದ್ಧಿಯನ್ನು ಪಂಚಾಯತಿ ಕೈಗೊಳ್ಳುವುದೆಂದರು. ಈಗಾಗಲೇ ಈ ಬಗ್ಗೆ ವಿವಿಧ ಇಲಾಖೆಗಳಿಡನೆ ಆಗ್ರಹಿಸಲಾಗಿದ್ದು ಸಂಸದ ಹಾಗೂ ಸಚಿವರ ನಿಧಿ ಪಂಚಾಯತಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲು ಯೋಜನೆ ಇರಿಸಿದೆ ಎಂದರು.
       ಪಂ.ಉಪಾಧ್ಯಕ್ಷೆ  ಡಾ.ಫಾತಿಮತ್ ಝಹನಾಸ್ ಹಂಸಾರ್ ಸಭೆಯ ಅಧ್ಯಕ್ಷತೆವಹಿಸಿದ್ದರು.  ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ  ಜಯಶ್ರೀ ಎ.ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ಪಂಚಾಯತ್ ಯೋಜನಾ  ಸಮಿತಿ ಅಧ್ಯಕ್ಷೆ ಆಯಿμÁ ಎ.ಎ.,ಪಂ.ಕಾರ್ಯದರ್ಶಿ ಸುನಿಲ್ ಆರ್. ಮೊದಲಾದವರು ಮಾತನಾಡಿದರು.
         ವಿವಿಧ ವಾರ್ಡ್ ಸದಸ್ಯರಾದ  ಶಶಿಧರ್, ರಾಮಚಂದ್ರ ಎಂ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಾಧಾಕೃಷ್ಣ ನಾಯಕ್,ಕುಸುಮಾವತಿ, ಝರಿನಾ ಎಂ, ಉಷಾ, ಆಶಾಲತ, ಇಂದಿರಾ, ರಮ್ಲ  ಮೊದಲಾದವರು ಉಪಸ್ಥಿತರಿದ್ದರು.  ಹೆಡ್ ಕ್ಲಾರ್ಕ್ ಪ್ರೇಮನ್ ಸ್ವಾಗತಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries