ಮಧೂರು: ಧ.ಗ್ರಾ ಯೋಜನೆಯ ಕಾಸರಗೋಡು ವಲಯದ ಉಳಿಯತ್ತಡ್ಕ ಕಾರ್ಯಕ್ಷೇತ್ರದ ಒಕ್ಕೂಟದ 15 ಸಂಘಗಳ ದಶಮಾನೋತ್ಸವ ಕಾರ್ಯಕ್ರಮ ಉಳಿಯತಡ್ಕ ಶ್ರೀ ಶಕ್ತಿ ಸಭಾಭವನದಲ್ಲಿ ಜರಗಿತು.
ಕವಿ ಲೇಖಕ ರಾಧಾಕೃಷ್ಣ ಕೆ. ಉಳಿಯತಡ್ಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಉಳಿಯತಡ್ಕ ಒಕ್ಕೂಟದ ಅಧ್ಯಕ್ಷ ಜ್ಞಾನೇಶ್ವರ ಆಚಾರ್ಯ ಪರಕ್ಕಿಲ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆಯರ ಸ್ವಾವಲಂಬಿ ಜೀವನದ ಬಗ್ಗೆ ಪಂಚಾಯತಿ ಮಾಜಿ ಸದಸ್ಯ ಹಾಗೂ ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಪುμÁ್ಪ ಗೋಪಾಲ್ ವಿಷಯ ಮಂಡಿಸಿದರು. ಕಾಸರಗೋಡು ತಾಲೂಕಿನ ಯೋಜನಾಧಿಕಾರಿ ಮುಖೇಶ್ ಮುಖ್ಯ ಅತಿಥಿಗಳಾಗಿದ್ದರು. ವಲಯ ಮೇಲ್ವಿಚಾರಕ ಪುಷ್ಪಲತಾ, ನಿಕಟಪೂರ್ವ ಅಧ್ಯಕ್ಷೆ ಶೋಭಿತ, ಮೀರಾ ಹರೀಶ್ ಗಟ್ಟಿ ಉಳಿಯ, ಓಮನ ಕುಟ್ಟಿ, ಸೇವಾ ಪ್ರತಿನಿಧಿ ಜ್ಯೋತಿ ಮಾಯಿಪ್ಪಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಳಿನಾಕ್ಷಿ ವರದಿ ಮಂಡಿಸಿದರು. ಮೀರಾ ಹರೀಶ್ ಗಟ್ಟಿ ಸ್ವಾಗತಿಸಿ, ಲೋಲಾಕ್ಷಿ ವಂದಿಸಿದರು. ರೋಹಿತ್ ಪರಕ್ಕಿಲ ನಿರೂಪಿಸಿದರು. ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಉಳಿಯತ್ತಡ್ಕದಲ್ಲಿ ಧ.ಗ್ರಾ.ಒಕ್ಕೂಟದ ದಶಮಾನೋತ್ಸವ
0
ಫೆಬ್ರವರಿ 01, 2023




.jpg)
