ಕಾಸರಗೋಡು: ಬೈಬಲ್ ಸುಡುವ ದೃಶ್ಯಗಳನ್ನೊಳಗೊಂಡ ವಿಡಿಯೋ ಅಪ್ ಲೋಡ್ ಮಾಡಿದಾತನ ಹಾಗೂ ವಿಡಿಯೋ ಪ್ರಚಾರಪಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ, ವಕೀಲ ಕೆ ಶ್ರೀಕಾಂತ್ ಆಗ್ರಹಿಸಿದ್ದಾರೆ.
ಸಮಾಜದಲ್ಲಿ ಹಾಗೂ ಧರ್ಮಗಳ ಮಧ್ಯೆ ಒಡಕುಮೂಡಿಸಿ ಇದರ ಲಾಭ ಪಡೆದುಕೊಳ್ಳುವ ಪ್ರಯತ್ನ ಇದರ ಹಿಂದಿದೆ. ಕ್ರೈಸ್ತರ ಪವಿತ್ರ ಗ್ರಂಥವಾಗಿರುವ ಬೈಬಲ್ ಅನ್ನು ಸುಟ್ಟು ಹಾಕುವುದರಿಂದ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಧರ್ಮಗ್ರಂಥವನ್ನು ಸುಟ್ಟುಹಾಕುವ ಮೂಲಕ ಕೋಮುಗಲಭೆ ನಡೆಸಲು ಯತ್ನಿಸಿದ ಈತನ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಬೇಕು. ಆರೋಪಿಯನ್ನು ತಕ್ಷಣ ಬಂಧಿಸಿ ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕು ಎಂದು ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಪಸಂಖ್ಯಾತರ ರಕ್ಷಕರು ಎಂದು ಹೇಳಿಕೊಳ್ಳುವ ಎಡ ಮತ್ತು ಬಲ ರಂಗಗಳು ಈ ವಿಷಯದಲ್ಲಿ ಮೌನ ವಹಿಸಿರುವುದು ಖಂಡನೀಯ. ಈ ಬಗ್ಗೆ ರಾಜ್ಯದ ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಶ್ರೀಕಾಂತ್ ತಿಳಿಸಿದ್ದಾರೆ.
ಬೈಬಲ್ ಸುಡುವ ಮೂಲಕ ಕೋಮು ಗಲಭೆಗೆ ಹುನ್ನಾರ-ಕಠಿಣ ಕ್ರಮಕ್ಕೆ ಬಿಜೆಪಿ ಆಗ್ರಹ
0
ಫೆಬ್ರವರಿ 01, 2023




