ಪೆರ್ಲ: ಕಿಡ್ನಿ ಕಾಯಿಲೆಯಿಂದ ಡಯಾಲಿಸಿಸ್ ಚಿಕಿತ್ಸೆಗೆ ಆರ್ಥಿಕ ಸಮಸ್ಯೆಯಿಂದ ಬಳಲುತಿದ್ದ ಎಣ್ಮಕಜೆ ಪಂಚಾಯತಿ ಪರ್ಪಕರ್ಯದ ಮದನ ಮೂಲ್ಯ ಎಂಬವರ ಪುತ್ರ ಸತೀಶ್ ಇವರಿಗೆ ಟೀಮ್ ಛತ್ರಪತಿ ಕ್ಲಭಿನ ವತಿಯಿಂದ ಸಹಾಯ ಧನ ಹಸ್ತಾಂತರಿಸಲಾಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ಪಿ. ಅನಿಲ್ ಕುಮಾರ್ ಇವರ ನೇತೃತ್ವದಲ್ಲಿ ಕ್ಲಬ್ಬಿನ ಸದಸ್ಯರಿಂದ ಹಾಗೂ ಸಹೃದಯಿ ಸಮಾಜ ಬಾಂಧವರಿಂದ ತುರ್ತಾಗಿ ಸಂಗ್ರಹಿಸಿದ 7000 ರೂ.ವನ್ನು ಹಸ್ತಾoತರಿಸಲಾಯಿತು. ಗಂಗಾಧರ ಕಲ್ಲಡ್ಕ, ಕಾರ್ತಿಕ್ ಸಿ ಎಚ್, ವಿಶ್ವಜಿತ್ ಮಣಿಯಂಪಾರೆ, ಅತುಲ್ ಕೃಷ್ಣ ಆಲ್ಚಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಯಾಲಿಸಿಸ್ ರೋಗಿಗೆ ಸಹಾಯ ಹಸ್ತ ಚಾಚಿದ ಟೀಮ್ ಛತ್ರಪತಿ
0
ಫೆಬ್ರವರಿ 08, 2023
Tags




.jpg)
